ಹೊಸ 8 ಶರತ್ತುಗಳಿಂದ ರಾಜ್ಯದ 60% ಮಹಿಳೆಯರಿಗೆ ಗ್ರಹಲಕ್ಷ್ಮಿ ಹಣ ಇಲ್ಲ, ಈ 8 ಷರತ್ತುಗಳ ಅಡಿಯಲ್ಲಿ ನೀವು ಇದ್ದೀರಾ ? / graha lakshmi yojana 8 new rules

ಎಲ್ಲರಿಗೂ ನಮಸ್ಕಾರ,

ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಯೋಜನೆಗಳ್ಳಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆಯು  ಈಗಾಗಲೇ  ಜಾರಿಗೊಳಿಸುವ ಹಂತದಲ್ಲಿದೆ.  ಆದರೆ ಕಾಂಗ್ರೆಸ್ ಸರ್ಕಾರವು ಈ ಮೊದಲು ತಿಳಿಸಿದಂತೆ ಕೇವಲ ಎರಡು ಶರತ್ತುಗಳನ್ನು ಮಾತ್ರ ತಿಳಿಸಿತ್ತು.  ಆದರೆ ಈಗ ಎಂಟು ಶರತುಗಳನ್ನು ವಿಧಿಸುತ್ತಿದೆ. ಆ  8  ಶರತ್ತುಗಳ  ನಿಯಮದ ಪ್ರಕಾರ ಹೋದರೆ  ಅರ್ಜಿ ಸಲ್ಲಿಸಿರುವ ಶೇಕಡ 60%  ಮಹಿಳೆಯರಿಗೆ ಜಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ಯಾವುದೇ ಹಣವು ಸಿಗುವುದಿಲ್ಲ.  ಏಕೆಂದರೆ ಈ ಎಂಟು ಷರತ್ತುಗಳಿಂದ, ಆ ಎಂಟು ಶರತ್ತು ಏನು?  ಈ ಶರತ್ತಿನಲ್ಲಿ ನೀವು ಕೂಡ  ಬರುತ್ತೀರಾ?  ನಿಮಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಸಿಗುವುದಿಲ್ಲವೇ ?  ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡಲಾಗುವುದು, ಹೀಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

 ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬರುವ ಮುಂಚೆ ರಾಜ್ಯದ ಜನತೆಗೆ 5 ಗ್ಯಾರಂಟಿಗಳ ಭರವಸೆಯನ್ನು ನೀಡಿತ್ತು.  ಈಗಾಗಲೇ ಮೂರು ಗ್ಯಾರಂಟಿಗಳು ಚಾಲ್ತಿಯಲ್ಲಿದ್ದು,  ಮಹಿಳೆಯರಿಗೆ  ಉಚಿತ ಬಸ್,  ಉಚಿತ  ಐದು ಕೆಜಿ ಅಕ್ಕಿ ಜೊತೆಗೆ ಹಣ ಮತ್ತು 200 ಯೂನಿಟ್ ಕರೆಂಟ್ ಅನ್ನು ಉಚಿತವಾಗಿ ರಾಜ್ಯದ ಜನತೆಗೆ ನೀಡಿದೆ.  ನಾಲ್ಕನೇ ಗ್ಯಾರೆಂಟಿ ಆದ   ಗ್ರಹಲಕ್ಷ್ಮಿ ಯೋಜನೆ ಈಗಾಗಲೇ ಜಾರಿಗೊಳಿಸಲು ದಿನಾಂಕವನ್ನು  ನಿಗದಿಪಡಿಸಿದ್ದು,  ಅಗಸ್ಟ್ 16ನೇ ತಾರೀಕು  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಎರಡು ಸಾವಿರ ರೂಪಾಯಿ ಹಣ ಸಿಗುತ್ತದೆ ಎಂದು ಹೇಳಲಾಗಿತ್ತು.  ಹೀಗಾಗಿ ಮನೆಯ ಎಲ್ಲಾ ಗ್ರಹಿಣಿಯರು ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರು. . ಆದರೆ ಅರ್ಜಿ ಸಲ್ಲಿಸುವ ವೇಳೆ ರಾಜ್ಯ ಸರ್ಕಾರವು ಕೇವಲ ಎರಡು  ಶರತ್ತುಗಳನ್ನು ವಿಧಿಸಿತ್ತು, ಆದರೆ ಈಗ ಕೊಟ್ಟ ಮಾತನ್ನು ಬದಲಿಸಿದೆ,  ಹೊಸದಾಗಿ 8  ಷರತ್ತುಗಳನ್ನು ವಿಧಿಸಲಿದೆ. 

Did Cong Govt in Karnataka Turn Deaf Ear to Finance Dept Advice Against Gruha  Lakshmi Scheme? - News18

 ಕರ್ನಾಟಕ ಸರ್ಕಾರವು  ರಾಜ್ಯದಲ್ಲಿರುವ ಬಡತನವನ್ನು ಹೋಗಲಾಡಿಸಲು ಈ ಐದು ಯೋಜನೆಗಳನ್ನು ಜಾರಿಗೊಳಿಸಿತು ಆದರೆ ಇದನ್ನು ಕೆಲವರು ಈಗಾಗಲೇ ಅವಶ್ಯಕತೆಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದಾರೆ.  ಹೀಗಾಗಿ  ಗ್ರಹಲಕ್ಷ್ಮಿ ಯೋಜನೆಯನ್ನು ಕೇವಲ  ಬಡವರ್ಗದ ಮಹಿಳೆಯರಿಗೆ ಮಾತ್ರ ತಲುಪಿಸಲು ಈ ಎಂಟು ಶರತ್ತುಗಳನ್ನು ವಿಧಿಸುತ್ತಿದೆ. ಎಂಟು ಯೋಜನೆಗಳನ್ನು ಅಧಿಕೃತವಾಗಿ  ಯಾವಾಗ ಜಾರಿಗೊಳಿಸಲಾಗುತ್ತದೆ, ಮತ್ತು ಇರುವ ಶರತ್ತುಗಳ ಬಗ್ಗೆ ತಿಳಿಯೋಣ. ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರು ಏ ಪಿ ಎಲ್/ ಬಿಪಿಎಲ್/ ಮತ್ತು ಅಂತಿಯೋದ್ಯಾಯ ಕಾರ್ಡನ್ನು ಹೊಂದಿರುವವರು ಈಗಾಗಲೇ ಅರ್ಜಿಯನ್ನು ಶೇಕಡ 80% ಮಹಿಳೆಯರು ಸಲ್ಲಿಸಿದ್ದಾರೆ.  ಈ ಎಲ್ಲ ಮಹಿಳೆಯರಿಗೆ 2000  ರೂಪಾಯಿಯನ್ನು ನೀಡುವುದಾದರೆ ವರ್ಷಕ್ಕೆ 31 ಸಾವಿರ ಕೋಟಿ ಹಣ ಸರ್ಕಾರದ  ಬೊಕ್ಕಸದಿಂದ ಖಾಲಿಯಾಗುತ್ತದೆ. ಅದೇ ಮುಂದಿನ ಆರು ತಿಂಗಳಿಗೆ ಸುಮಾರು 17000 ಕೋಟಿ ಹಣ ಬೇಕಾಗುತ್ತದೆ. ಇದರಿಂದ ಹಣಕಾಸು ಇಲಾಖೆಗೆ  ಆರ್ಥಿಕವಾಗಿ ತೊಂದರೆ ಉಂಟಾಗುತ್ತದೆ.  ಈ ವರ್ಷ ಈಗಾಗಲೇ  ಉಚಿತ  ಬಸ್ ಪ್ರಯಾಣದಿಂದ ಸಾರಿಗೆ ಇಲಾಖೆಗೆ  ಸಾವಿರಾರು ಕೋಟಿ ನಾಷ್ಟವಾಗಿದೆ.  ಇದರಿಂದಾಗಿ ಹಣಕಾಸು ಇಲಾಖೆಯಲ್ಲಿ ಹೆಚ್ಚಿನ  ಹಣ ಇಲ್ಲದೆ  ಇರುವುದರಿಂದ, ಮಹಿಳೆಯರಿಗೆ  2000 ರೂಪಾಯಿ ಹಣವನ್ನು ಎಲ್ಲಾ ಮಹಿಳೆಯರಿಗೆ ಕೊಡಲು ಸಾಧ್ಯವಾಗುವುದಿಲ್ಲ, ಒಂದು ವೇಳೆ ಕೊಡುವುದಾದರೆ  ಕೇವಲ ಈ ವರ್ಷ ಮಾತ್ರ ಗೃಹಲಕ್ಷ್ಮಿಯರಿಗೆ ಹಣವನ್ನು ನೀಡಲಾಗುತ್ತದೆ.  ಹೊರತುಪಡಿಸಿ ಮುಂದಿನ ನಾಲ್ಕು ವರ್ಷವೂ ಯಾವುದೇ ರೀತಿಯ ಹಣ ಗೃಹಲಕ್ಷ್ಮಿಯರಿಗೆ ನೀಡಲಾಗುವುದಿಲ್ಲ. ಹಣಕಾಸು ಇಲಾಖೆಯು ನೀಡಿರುವ 8 ಶರತ್ತುಗಳ ಬಗ್ಗೆ ನೋಡೋಣ. 

  • ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ  ಗ್ರಹಲಕ್ಷ್ಮಿ ಯೋಜನೆ  ನೀಡಬೇಕು. 
  •  5  ಎಕರೆಗೂ  ಮೀರಿದ  ಒಣ ಭೂಮಿ  ಹೊಂದಿರುವವರಿಗೆ ಕೊಡುವಂತಿಲ್ಲ. 
  •   ನಾಲ್ಕು ಚಕ್ರಗಳ  ವಾಹನ  ಹೊಂದಿದವರಿಗೂ  ಕೊಡಬಾರದು. 
  •  ಅಂಗನವಾಡಿ  ಕಾರ್ಯಕರ್ತೆಯರಿಗೆ  ಕೊಡುವಂತಿಲ್ಲ. 
  •  ಸರ್ಕಾರಿ ಉದ್ಯೋಗಿಗಳು  ಮತ್ತು  ಪಿಂಚಣಿ ಪಡೆಯುವವರಿಗೆ ಅನ್ವಯಿಸುವುದಿಲ್ಲ. 
  •  ಆದಾಯ ತೆರಿಗೆ   ಪಾವತಿದಾರರಿಗೆ   ಕೊಡಬಾರದು.
  • GST ರಿಟರ್ನ್ಸ್  ಪಾವತಿಸುವ ಮಹಿಳೆಯರಿಗೆ ನೀಡಬಾರದು. 
  •  ಪ್ರೊಫೆಷನಲ್ ಟ್ಯಾಕ್ಸ್  ಪಾವತಿದಾರರಿಗೆ ಕೊಡಬಾರದು. 

 

 ಆದರೆ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಜಾರಿಗೆ ತರುವ ಸಂದರ್ಭದಲ್ಲಿ ಕೇವಲ ಎರಡು ಶರತ್ತುಗಳನ್ನು ಮಾತ್ರ ನೀಡಿದ್ದು, ಆದರೆ ಈ 8 ಯೋಜನೆಗಳನ್ನು  ಅಧಿಕೃತವಾಗಿ  ಜಾರಿಗೊಳಿಸಿಲ್ಲ, ಒಂದು ವೇಳೆ  ಜಾರಿಗೊಳಿಸಿದರೆ ಶೇಕಡ 50 ಪರ್ಸೆಂಟ್ ಜನ ಮಹಿಳೆಯರು ಈ ಯೋಜನೆಯಿಂದ ಹೊರಗಿರುತ್ತಾರೆ. ಸರ್ಕಾರ ಈವರೆಗೆ ಯಾವುದೇ ಎಂಟು ಶರತ್ತುಗಳನ್ನು  ವಿಧಿಸಿಲ್ಲ.  ಮತ್ತು ಯಾವುದೇ ಅಧಿಕಾರಿಗಳು ಈ ಶರತುಗಳ ಬಗ್ಗೆ ಇವರಿಗೂ ಚರ್ಚಿಸಿಲ್ಲ, ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಎಂಟು ಶರತ್ತುಗಳು ಅನ್ವಯಿಸದೆ ಕೇವಲ ಎರಡು ಶರತ್ತುಗಳು ಮಾತ್ರ  ಅನ್ವಯಿಸುತ್ತದೆ. ಹೀಗಾಗಿ ಯಾವುದೇ ಗ್ರಹಲಕ್ಷ್ಮಿಯರಿಗೆ ಭಯ ಬೇಡ, ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment