ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ.! ಸರ್ಕಾರದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ 2 ತಿಂಗಳ  4000 ಒಂದೇ ಬಾರಿ ಜಮಾ ಮಾಡುದಾಗಿ ಆದೇಶ.?

 

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಿದ್ದೀರಾ  ನಿಮಗೆಲ್ಲ ರಾಜ್ಯ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ.  ಈಗಾಗಲೇ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ 2000 ಹಣವನ್ನು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ ಆದರೆ ಈಗಾಗಲೇ  ಅರ್ಜಿ ಸಲ್ಲಿಸಿರುವ ಮಹಿಳೆಯರಲ್ಲಿ ಸುಮಾರು 60 ರಷ್ಟು ಮಹಿಳೆಯರಿಗೆ ಹಣ ಜಮಾ ಆಗಿದ್ದು ಉಳಿದ ಮಹಿಳೆಯರಿಗೆ ಹಣವನ್ನು ಜಮಾ ಮಾಡುವ ಬಗ್ಗೆ ಸರ್ಕಾರದಿಂದ ಇದೀಗ ಒಂದು ಹೊಸ ಆದೇಶವನ್ನು ಹೊರಡಿಸಿದೆ ಈ ಆದೇಶದಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯದಿರುವ ಮಹಿಳೆಯರಿಗೆ ಸ್ವಲ್ಪಮಟ್ಟಿನ  ನಿರಾಳ ಆಗಲಿದೆ.  ಹಾಗಾದ್ರೆ ನಿಮಗೂ ಸಹ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲದಿದ್ದರೆ ಸರ್ಕಾರ ತಿಳಿಸಿರುವ ಈ ಕೆಲವು ಚಿಕ್ಕ ಕೆಲಸಗಳನ್ನು ಕಡ್ಡಾಯವಾಗಿ ನೀವು ಮಾಡಲೇಬೇಕು ಇದರಿಂದ ಸೆಪ್ಟೆಂಬರ್ ಕೊನೆಯಲ್ಲಿ ಎರಡು ತಿಂಗಳ ನಾಲ್ಕು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

 ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ.!

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದರು ಇದರಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಈ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದ್ದು ಈಗಾಗಲೇ ಫಲಾನುಭವಿಗಳ ಹೊಸ ಲಿಸ್ಟ್ ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಇದರ ಬೆನ್ನಲ್ಲೇ ಸರ್ಕಾರದಿಂದ ಫಲಾನುಭವಿಗಳ ಲಿಸ್ಟ್ ನಲ್ಲಿ ಇರುವಂತಹ ಮಹಿಳೆಯರಿಗೆ 2000 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಕೆಲವರಿಗೆ ಈ ಹಣ ತಲುಪಿಲ್ಲ ಅಂತಹ ಮಹಿಳೆಯರಿಗೆ ಇದೀಗ ಸರ್ಕಾರದಿಂದ ಒಂದು ಹೊಸ ಆದೇಶ ಹೊರಡಿಸಿದ್ದು ಇದರಂತೆ ಮಹಿಳೆಯರು ನಡೆದರೆ ಸೆಪ್ಟೆಂಬರ್ ಕೊನೆಯಲ್ಲಿ ಒಟ್ಟಾಗಿ ಎರಡು ತಿಂಗಳ ನಾಲ್ಕು ಸಾವಿರ ರೂಪಾಯಿಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಸರ್ಕಾರದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ 2 ತಿಂಗಳ  4000 ಒಂದೇ ಬಾರಿ ಜಮಾ ಮಾಡುದಾಗಿ ಆದೇಶ.?

ಹೌದು ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಒಂದು ವೇಳೆ ನಿಮಗೆ ಹೀಗಾದರೆ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಹಾಗಿದ್ದರೆ ನಿಮಗೆ ಪ್ರತಿ ತಿಂಗಳು ಯಾವ ಬ್ಯಾಂಕ್ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿದೆಯೋ ಅದೇ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ಹಣ ಜಮಾ ಆಗಲಿದೆ.

 ಒಂದು ವೇಳೆ  ನಿಮಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಈಗಾಗಲೇ ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ತಿಳಿಸಿರುವ ಹಾಗೆ ಕೆಲವು ಸಣ್ಣ ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಬೇಕಾಗುತ್ತದೆ ಈ ಕೆಲಸಗಳನ್ನು ನೀವು ಒಂದು ವೇಳೆ ಶೀಘ್ರದಲ್ಲಿ ಮಾಡಿ ಮುಗಿಸಿದರೆ ನಿಮಗೆ ಸೆಪ್ಟೆಂಬರ್ ನ ಕೊನೆಯಲ್ಲಿ ಆಗಸ್ಟ್  ತಿಂಗಳ 2000 ಹಾಗೆ ಸೆಪ್ಟೆಂಬರ್ ತಿಂಗಳ 2000 ಒಟ್ಟಾಗಿ ನಾಲ್ಕು ಸಾವಿರ ರೂಪಾಯಿಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಇಂದು ಹೊಸ ಆದೇಶವನ್ನು ಹೊರಡಿಸಲಾಗಿದೆ ಇದರಿಂದ ಈ ತಿಂಗಳು ನಿಮಗೆ ಇನ್ನೂ 15 ದಿನಗಳ ಕಾಲಾವಕಾಶವಿದ್ದು ಇದರೊಳಗಾಗಿ ಈ ಚಿಕ್ಕ ಕೆಲಸಗಳನ್ನು ನೀವು ಮಾಡಲೇಬೇಕಾಗಿದೆ. 

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಪಡೆಯಲು ಮಾಡಬೇಕಾದ ಕೆಲಸ ಏನು.?

ಸದ್ಯ ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಮೊದಲನೆಯದಾಗಿ ನೀವು ನಿಮ್ಮ ಅರ್ಜಿ ಸರಿಯಾದ ರೀತಿಯಲ್ಲಿ ಸಲ್ಲಿಕೆ ಆಗಿದೆ ಹಾಗೆ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಬಿಡುಗಡೆ ಮಾಡಿರುವ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳುವುದು ಸೂಕ್ತ.

 ನಂತರ ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಿರುವ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಚೆಕ್ ಮಾಡಿಕೊಳ್ಳಬೇಕಾಗಿರುವುದು  ಮುಖ್ಯವಾಗಿರುತ್ತದೆ ಹಾಗೆ ಈ ಎಲ್ಲಾ ಕೆಲಸವನ್ನು ಮಾಡುವ ಮೊದಲು  ನೀವು ಹೊಂದಿರುವ ಬ್ಯಾಂಕ್ ಖಾತೆಗಳನ್ನು ಒಂದು ಬಾರಿ ಗೃಹಲಕ್ಷ್ಮಿ ಯೋಜನೆಯ  ಹಣ ಬಂದಿದೆಯೇ ಎಂದು ಒಂದು ಬಾರಿ ಚೆಕ್ ಮಾಡಿಕೊಳ್ಳುವುದು ಸೂಕ್ತ.

 ಕೊನೆಯದಾಗಿ  ನೀವು ಯಾವುದೇ ಹಣವನ್ನು ಪಡೆದಿಲ್ಲದಿದ್ದರೆ ಮೊದಲು ನೀವು ನಿಮ್ಮ ಬಿಪಿಎಲ್ ಕಾರ್ಡನ್ನು  ಪರಿಶೀಲಿಸಬೇಕಾಗುತ್ತದೆ ಅದರಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು  ಬಿಪಿಎಲ್ ಕಾರ್ಡ್ ನ ಯಜಮಾನ ಸ್ಥಳದಲ್ಲಿ  ಇದೆಯಾ ಹಾಗೆ ನಿಮ್ಮ ಬಿಪಿಎಲ್ ಕಾರ್ಡ್ಗೆ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

 ಈ ಎಲ್ಲಾ ಕೆಲಸಗಳನ್ನು ನೀವು ಶೀಘ್ರದಲ್ಲಿ ಮಾಡಿ ಮುಗಿಸಿದರೆ ನೀವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಎರಡು ತಿಂಗಳ  2,000 ದಂತೆ 4000ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಳ್ಳಬಹುದು ಧನ್ಯವಾದಗಳು ..

Leave a Comment