ಗೃಹಲಕ್ಷ್ಮಿ ಯೋಜನೆಯ ಆಗಸ್ಟ್  ತಿಂಗಳ 2,000 ಹಣ ನಿಮಗಿನ್ನು ಬಂದಿಲ್ವಾ.!  ಹಾಗಿದ್ದರೆ ಭಯಪಡುವ ಅಗತ್ಯವಿಲ್ಲ ಸರ್ಕಾರದಿಂದ ಈ ಬಗ್ಗೆ ಹೊಸ ಆದೇಶ ಬಂದಿದೆ.?

 

 ಎಲ್ಲರಿಗೂ ನಮಸ್ಕಾರ….

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ  ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಚಲನೆ ನೀಡಲಾಗಿದೆ.  ಆದರೆ ಈ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುವಲ್ಲಿ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮತ್ತೊಂದು ಹೊಸ ಆದೇಶವನ್ನು ಹೊರಡಿಸಿದೆ.  ಹೌದು ನಿಮಗೆ ಇನ್ನು ಗೃಹಲಕ್ಷ್ಮಿ ಯೋಜನೆಯ 2000  ಹಣ ಬಂದಿಲ್ಲ ಅಂತ ಅಂದ್ರೆ ಬೇಸರ ಮಾಡಿಕೊಳ್ಳವ ಅವಶ್ಯಕತೆ ಇಲ್ಲ ಕಾರಣ ಸರಕಾರದಿಂದ ಈ ಬಗ್ಗೆ ತಿಳಿಸಿರುವ ಹೊಸ ಆದೇಶ ಈ ರೀತಿ ಇದೆ ಲೇಖನವನ್ನು ಪೂರ್ತಿಯಾಗಿ  ಓದಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ..

ಗೃಹಲಕ್ಷ್ಮಿ ಯೋಜನೆಯ ಆಗಸ್ಟ್  ತಿಂಗಳ 2,000 ಹಣ ನಿಮಗಿನ್ನು ಬಂದಿಲ್ವಾ.! 

ಸದ್ಯ ರಾಜ್ಯದಲ್ಲಿ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇದರಲ್ಲಿ ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರದಿಂದ ಈ  ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು  ಯೋಜನೆಗೆ ಚಾಲನೆ ನೀಡಿದ್ದು ಈಗಾಗಲೇ ಸುಮಾರು 60ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಕೂಡ ಆಗಿದೆ.

  ಗೃಹಲಕ್ಷ್ಮಿ ಯೋಜನೆಯ ಹಣ ಈಗಲೂ ಸುಮಾರು 40ರಷ್ಟು  ಮಹಿಳೆಯರಿಗೆ ಹಣ ಬಂದಿಲ್ಲ ಒಂದು ವೇಳೆ ನಿಮಗೂ ಸಹ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ ಅಂದ್ರೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಸರ್ಕಾರದಿಂದ ಈ ಬಗ್ಗೆ ಹೊಸ ಆದೇಶ ಹೊರಡಿಸಿದೆ,  ಈ ಚಿಕ್ಕ ಕೆಲಸಗಳನ್ನ ಮಾಡಿದರೆ ಸಾಕು ನೀವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವನ್ನು ಅಂದರೆ ಎರಡು ತಿಂಗಳ ಹಣವನ್ನು ಒಂದೇ ಬಾರಿ 4000ವನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದು.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

ರಾಜ್ಯ ಸರ್ಕಾರದಿಂದ ಎರಡು ತಿಂಗಳ ಹಣವನ್ನು ಒಂದೇ ಬಾರಿ ಜಮಾ ಮಾಡುವುದಾಗಿ ಆದೇಶ.?

 ಹೌದು ಈಗಾಗಲೇ ರಾಜ್ಯದಲ್ಲಿ ಕೆಲವು ಮಹಿಳೆಯರಿಗೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಉಳಿದ ಕೆಲವು ಮಹಿಳೆಯರಿಗೆ ಸರ್ಕಾರದಿಂದ  ಬ್ಯಾಂಕ್ ಖಾತೆಗೆ ಹಣ ಪಡೆಯಲು ಕೆಲವು ಚಿಕ್ಕ ಕೆಲಸಗಳನ್ನು ಮಹಿಳೆಯರು ಕಡ್ಡಾಯವಾಗಿ ಮಾಡಬೇಕಾಗಿ ತಿಳಿಸಿದೆ ಈ ಕೆಲಸಗಳನ್ನು ಒಂದು ವೇಳೆ ಮಾಡಿ ಮುಗಿಸಿದರೆ ಅಂತಹ ಮಹಿಳೆಯರಿಗೆ ಸೆಪ್ಟೆಂಬರ್ ನ ಕೊನೆಯಲ್ಲಿ ಆಗಸ್ಟ್ ತಿಂಗಳ  2000 ಮತ್ತು ಸೆಪ್ಟೆಂಬರ್ ತಿಂಗಳು 2000 ಸೇರಿ ಒಂದೇ ಬಾರಿ 4000ವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿ ಹೊಸ ಆದೇಶ ಹೊರಡಿಸಿದೆ.

 ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣವನ್ನು ಒಂದೇ ಬಾರಿ ಪಡೆಯಲು ಮಾಡಬೇಕಾದ ಚಿಕ್ಕ ಕೆಲಸ ಯಾವುದು.?

 ಹೌದು, ಈಗಾಗಲೇ ಈ ಬಗ್ಗೆ ಸರ್ಕಾರದಿಂದ  ಅಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರು ಈ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು ಏಕೆಂದರೆ ಸರ್ಕಾರದಿಂದ ಯಾವುದೇ ಹಣ ಬ್ಯಾಂಕ್ ಖಾತೆಗೆ  ಜಮಾ ಆಗಬೇಕು ಎಂದರು ಅದು ಆಧಾರ್ ಕಾರ್ಡ್ ಮೂಲಕವೇ ಆಗುವುದು ಆ ಕಾರಣ ನಿಮ್ಮ ಆಧಾರ್ ಕಾರ್ಡ್ಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕಾಗಿ ತಿಳಿಸಲಾಗಿದೆ ಇದರ ಜೊತೆಗೆ ಮತ್ತು ಕೆಲವು ಚಿಕ್ಕ ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ.

  1. ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಹೆಸರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಇದೆಯಾ ಎಂದು ಮೊದಲು ಚೆಕ್ ಮಾಡುವುದು ಅತಿ ಮುಖ್ಯ.
  2.  ಹಾಗೆ ಎರಡನೆಯದಾಗಿ ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಇದ್ದರೆ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡುವುದು ಮುಖ್ಯವಾಗಿರುತ್ತದೆ ಇದನ್ನು  ಡಿ ಬಿ ಟಿ ಲಿಂಕ್ ಎಂದು ಸಹ ಕರೆಯಲಾಗುತ್ತದೆ.
  3.  ಕೊನೆಯದಾಗಿ ಅರ್ಜಿ ಸಲ್ಲಿಸಿರುವ ಮಹಿಳೆಯ ಮನೆಯ ಬಿಪಿಎಲ್ ಕಾರ್ಡ್ ನ ಮನೆಯ ಯಜಮಾನಿಯ ಸ್ಥಾನದಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಮತ್ತು ಭಾವಚಿತ್ರ ಇರುವುದು ಹಾಗೆ ಬಿಪಿಎಲ್ ಕಾಡಿಗೆ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕಾಗಿ ಸರ್ಕಾರದಿಂದ ತಿಳಿಸಿದೆ.

ಈ ಎಲ್ಲ ಕೆಲಸಗಳನ್ನು ಮಾಡಿರುವ ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 2000 ಬ್ಯಾಂಕ್ ಖಾತೆಗೆ ಜಮಾ ಆಗಿದೆ ಒಂದು ವೇಳೆ ನೀವು ಇನ್ನ ಈ ಕೆಲಸ ಮಾಡಿಲ್ಲದಿದ್ದರೆ ಈ ಕೂಡಲೇ ಮಾಡಿ ನಿಮಗೆ ಸೆಪ್ಟೆಂಬರ್ ಕೊನೆಯಲ್ಲಿ ಎರಡು ತಿಂಗಳ ಹಣ ಒಂದೇ ಬಾರಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಧನ್ಯವಾದಗಳು…

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

Leave a Comment