ಎಲ್ಲರಿಗೂ ನಮಸ್ಕಾರ..
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಹೌದು ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು ಈಗಾಗಲೇ ಮೂರು ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಚಾಲನೆಗೊಂಡಿದ್ದು ಇದೀಗ ನಾಲ್ಕನೇ ಗ್ಯಾರೆಂಟಿ ಯೋಜನೆ ಹಾಗಿರುವ ಗೃಹಲಕ್ಷ್ಮಿ ಯೋಜನೆಗೂ ಆಗಸ್ಟ್ ತಿಂಗಳಿನಲ್ಲಿ ಚಾಲನೆ ನೀಡಲಾಗಿದೆ ಆದರೆ ಸೆಪ್ಟೆಂಬರ್ ತಿಂಗಳು ಅರ್ಧ ಮುಗಿದರು ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ತಲುಪದಿರುವುದು ಸ್ವಲ್ಪ ಗೊಂದಲವನ್ನು ಉಂಟು ಮಾಡಿದೆ. ನೀವು ಸಹ ಅರ್ಜಿ ಸಲ್ಲಿಸಿದ್ದು ನಿಮಗೂ ಸಹ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಈ ಕೆಲವು ಪುಟ್ಟ ಕೆಲಸಗಳನ್ನು ಮಾಡಿ ಸೆಪ್ಟೆಂಬರ್ ಕೊನೆಯ ದಿನಾಂಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೆಯ ಕದ್ದಿನ ಹಣವನ್ನು ಪಡೆದುಕೊಳ್ಳಿ ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ..
ಗೃಹಲಕ್ಷ್ಮಿ ಯೋಜನೆಯ ಹಣ ನಿಮಗಿನ್ನು ಬಂದೇ ಇಲ್ವಾ.!
ಕರ್ನಾಟಕ ರಾಜ್ಯ ಸರ್ಕಾರ ಚಾಲನೆ ಮಾಡಿ 15 ದಿನಗಳು ಕಳೆದಿದೆ ಆದರೂ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗದಿರುವುದು ಗೊಂದಲವನ್ನುಂಟು ಮಾಡಿದೆ ಅಲ್ಲದೆ ಎಲ್ಲರಿಗೂ ಮೂಡಿರುವ ಪ್ರಶ್ನೆ ಎಂದರೆ ನಿಮಗಿನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದೇ ಇಲ್ವಾ..
ಹೌದು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2000 ದಂತೆ ಹಣ ಖಾತೆಗೆ ಜಮಾ ಮಾಡಲು ಆದೇಶ ಹೊರಡಿಸಿದೆ ಆದರೆ ಕೆಲವರಿಗೆ ಮಾತ್ರ ಈ ಹಣ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಖಾತೆಗೆ ಜಮಾಹಾಗಿದ್ದು ಸುಮಾರು 60 ರಿಂದ 70ರಷ್ಟು ಮಹಿಳೆಯರಿಗೆ ಹಣ ಜಮಾ ಹಾಗಿಲ್ಲ. ಈ ಬಗ್ಗೆ ಕಾರಣ ಕೇಳಿದರೆ ಸರ್ಕಾರದಿಂದ ಬರುವ ಉತ್ತರ ನೀವು ಕೆಲವು ಕಂಡಿಶನ್ಗಳನ್ನು ಪಾಲಿಸಬೇಕು ಇಲ್ಲದಿದ್ದರೆ ನಿಮಗೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಿಲ್ಲ ಆದ್ದರಿಂದ ತಕ್ಷಣ ಈ ಕೆಲಸವನ್ನ ಮಾಡಿ ಎಂಬ ಬಗ್ಗೆ ಸೂಚನೆ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಮಾಡಬೇಕಾದ ಕೆಲಸ ಏನು.?
ಹೌದು ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಚಾಲನೆ ನೀಡಲಾಗಿದೆ ಈಗಾಗಲೇ ಸುಮಾರು 50 ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಕೂಡ ಆಗಿದೆ ಆದರೆ ಉಳಿದ ಮಹಿಳೆಯರಿಗೆ ಜಮಾ ಆಗಲು ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿದೆ ಆದ್ದರಿಂದ ಕಡ್ಡಾಯವಾಗಿ ಮಹಿಳೆಯರು ಈ ಮೂರು ಕೆಲಸವನ್ನ ಮಾಡಲೇಬೇಕು ಇಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರದಿಂದ ವರದಿ ನೀಡಲಾಗಿದೆ.
ಸದ್ಯ ಈಗಾಗಲೇ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಸರ್ಕಾರದಿಂದ ತಿಳಿಸಿರುವ ಈ ಮೂರು ಕಂಡಿಶನ್ಗಳನ್ನು ಪಾಲಿಸಿ ಇಲ್ಲದಿದ್ದರೆ ಕಡ್ಡಾಯವಾಗಿ ಈಗಲೇ ಈ ಮೂರು ಕಂಡಿಷನ್ಗಳನ್ನು ಸರಿಪಡಿಸಿಕೊಳ್ಳುವುದು ಸೂಕ್ತ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯವಿಲ್ಲ.
- ಮೊದಲನೆಯದಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿದಾರರ ಹೆಸರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳುವುದು ಮೊದಲ ಕೆಲಸವಾಗಿರುತ್ತದೆ.
- ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯ ಆಧಾರ್ ಕಾರ್ಡಿಗೆ (ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡುವುದು ) ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಚೆಕ್ ಮಾಡಿಕೊಳ್ಳುವುದು.
- ಕೊನೆಯದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಆ ಮನೆಯ ಬಿಪಿಎಲ್ ಕಾರ್ಡ್ ನ ಮನೆಯ ಯಜಮಾನಿಯ ಸ್ಥಾನದಲ್ಲಿ ಆ ಮಹಿಳೆಯ ಹೆಸರು ಮತ್ತು ಭಾವಚಿತ್ರ ಇರಬೇಕು.
ಹೀಗೆ ಈ ರೀತಿ ಕೆಲವು ಕಂಡಿಶನ್ಗಳನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ಮಹಿಳೆಯರು ಕಡ್ಡಾಯವಾಗಿ ಪಾಲಿಸಲೇಬೇಕು ಒಂದು ವೇಳೆ ಈ ಎಲ್ಲಾ ಕೆಲಸಗಳನ್ನು ಮಾಡಿರುವ ಮಹಿಳೆಯರಿಗೆ ಈಗಾಗಲೇ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಇನ್ನು ಉಳಿದ ಮಹಿಳೆಯರಿಗೆ ಹಣ ಜಮಾ ಮಾಡಲು ಸಮಸ್ಯೆ ಉಂಟಾಗಿದೆ ಒಂದು ವೇಳೆ ನೀವು ಈ ಕೆಲಸ ಮಾಡಿಲ್ಲದಿದ್ದರೆ ಈ ಕೂಡಲೇ ಮಾಡಿ.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಪಾಲಿಸಬೇಕಾದ ಮೂರು ಕಂಡಿಶನ್ಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಮತ್ತು ಆ ಕೆಲಸಗಳನ್ನು ಮೊಬೈಲ್ ನಲ್ಲಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಒಂದು ಲೇಖನ ಸಿಗುತ್ತದೆ ಇದರಲ್ಲಿ ಪೂರ್ತಿಯಾಗಿ ಓದಿ ಈ ಕೆಲಸಗಳನ್ನು ಮಾಡಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಿರಿ. ಧನ್ಯವಾದಗಳು….