ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರು ಸಹ ಹಣ ಬಂದಿಲ್ವಾ.! ಹಾಗಾದ್ರೆ ಈ ಸ್ಟೇಟಸ್ ಚೆಕ್ ಮಾಡುವುದು ಬಹಳ ಮುಖ್ಯ.? ಇಲ್ಲಿದೆ ಸಂಪೂರ್ಣ ಮಾಹಿತಿ.? 

ಎಲ್ಲರಿಗೂ ನಮಸ್ಕಾರ..ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಇದೆ ಆಗಸ್ಟ್ 30ನೇ ದಿನಾಂಕ ಚಾಲನೆ ನೀಡಿದ್ದು ಈಗಾಗಲೇ ರಾಜ್ಯದ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ಮಹಿಳೆಯರಿಗೆ ಹಣವನ್ನು ಜಮಾ ಮಾಡಲು ಸರ್ಕಾರ ಮುಂದಾಗಿದೆ ಅಲ್ಲದೆ ಈಗಾಗಲೇ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ  ಜಮಾ ಆಗಿದ್ದು ಇನ್ನು ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಬಂದಿರುವುದಿಲ್ಲ ಅಲ್ಲದೆ ಸರ್ಕಾರದಿಂದ ಈ ಬಗ್ಗೆ ಕೆಲವು ಸೂಚನೆಗಳು ಮತ್ತು ಕೆಲವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಹೊಸ ಲಿಸ್ಟ್ಗಳನ್ನು ಸಹ ಬಿಡುಗಡೆ ಮಾಡಿದ್ದು ಇದೀಗ ಯೋಜನೆಯ ಹಣ ಕೆಲವರಿಗೆ ಬಂದಿದೆ ಕೆಲವರಿಗೆ ಬಂದಿಲ್ಲ ಎಂದರೆ ಕಾರಣ ಏನು ಎಂಬ ಬಗ್ಗೆ  ಲೇಖನದಲ್ಲಿ ಪೂರ್ತಿಯಾಗಿ ತಿಳಿಯೋಣ ಬನ್ನಿ..

ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ.!

WhatsApp Group Join Now
Telegram Group Join Now

 ಹೌದು ಈಗಾಗಲೇ ತಿಳಿಸಿದ ಹಾಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಸ್ಟ್ 30ನೇ ದಿನಾಂಕ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ  ಯೋಜನೆಗೆ ಚಾಲನೆ ನೀಡಿದ್ದು ಈಗಾಗಲೇ ಮಹಿಳೆಯರಿಗೆ ಯೋಜನೆಯ 2000 ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಅಲ್ಲದೆ ಈ ಮಧ್ಯೆ ಸರ್ಕಾರ ಕೆಲವು ನಿಯಮಗಳು ಮತ್ತು ಸೂಚನೆಗಳನ್ನು ಮಹಿಳೆಯರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ  ತಿಳಿಸಿದ್ದು ಇನ್ನು ಕೊನೆಯ ಒಂದು ಗ್ಯಾರಂಟಿ ಮಾತ್ರ ಬಾಕಿ ಉಳಿದಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ.! ಸರ್ಕಾರದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ 2 ತಿಂಗಳ  4000 ಒಂದೇ ಬಾರಿ ಜಮಾ ಮಾಡುದಾಗಿ ಆದೇಶ.?

ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರು ಸಹ ಹಣ ಬಂದಿಲ್ವಾ.!

ಸದ್ಯ ರಾಜ್ಯದಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದ ಗ್ಯಾರಂಟಿ ಯೋಜನೆ ಆಗಿರುವ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಚಾಲನೆ ಶುರುವಾಗಿದ್ದು ಈಗಾಗಲೇ ರಾಜ್ಯದಲ್ಲಿ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ ಅಲ್ಲದೆ ಈಗಾಗಲೇ ಸರ್ಕಾರದಿಂದ ಯೋಜನೆಯ ಲಿಸ್ಟ್ ನಲ್ಲಿರುವ ಹೆಸರಿನ ಮಹಿಳೆಯರಿಗೆ  2000 ಹಣ ಜಮಾ ಆಗುತ್ತದೆ.  ಆದರೆ ಈ ಮಧ್ಯೆ ಮತ್ತಷ್ಟು ಕೆಲವು ಸಮಸ್ಯೆಗಳು ಎದುರಾಗಿದ್ದು ಈಗಾಗಲೇ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಅವರ ಕೈ ತಲುಪಿದೆ ಆದರೆ ಕೆಲವು ಮಹಿಳೆಯರ ಹೆಸರು ಲಿಸ್ಟ್ ನಲ್ಲಿ ಅಂದರೆ ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ನಲ್ಲಿ ಹೆಸರು ಇದ್ದರು ಅವರ ಬ್ಯಾಂಕ್ ಖಾತೆಗೆ ಹಣ ತಲುಪಿಲ್ಲ ಎಂಬುದು  ಸಮಸ್ಯೆಯಾಗಿದೆ. 

   ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ನಲ್ಲಿ ಹೆಸರು ಇದ್ದರು ಹಣ ಬರೆದಿರಲು ಕಾರಣ ಏನು.?

ಹೌದು ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟನ್ನು ಸರ್ಕಾರದಿಂದ ಯೋಜನೆಯ ಚಾಲನೆಯ ನಂತರ ಬಿಡುಗಡೆ ಮಾಡಿದ್ದು ಈ ಲಿಸ್ಟ್ ನಲ್ಲಿ  ರಾಜ್ಯದಲ್ಲಿ ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಯೋಜನೆಯ ಹಣ ಸಿಗಲಿದೆ.  ಅಲ್ಲದೆ ಈಗಾಗಲೇ ರಾಜ್ಯದ ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ತಲುಪಿದ್ದು ಅವರ ಕೈ ಸೇರಿದೆ ಆದರೆ ಕೆಲವು ಮಹಿಳೆಯರಿಗೆ ಯೋಜನೆಯ ಹಣ ತಲುಪದಿರಲು ಕಾರಣ ಏನೆಂದರೆ ಅವರ ಆಧಾರ್ ಕಾರ್ಡಿಗೆ ಬ್ಯಾಂಕ್  ಅಕೌಂಟ್ ಲಿಂಕ್ ಆಗದೆ ಇರುವುದು ಇದರಿಂದ ಯೋಜನೆಯ ಹಣ ಜಮಾ ಆಗುವಲ್ಲಿ ಸಮಸ್ಯೆಯಾಗಿದೆ.

 ಈಗಾಗಲೇ ತಿಳಿಸಿದ ಹಾಗೆ ಸರ್ಕಾರದಿಂದ ಈ ಗೃಹಲಕ್ಷ್ಮಿ ಯೋಜನೆಯ ಹಣವು ಆಧಾರ್ ಕಾರ್ಡ್ ಲಿಂಕ್ ಮೂಲಕ ಅಂದರೆ ಆಧಾರ್  ಕಾರ್ಡ್  ಡಿಬಿಟಿ  ಅಕೌಂಟ್ ಲಿಂಕ್ ನ ಮೂಲಕ ಸರ್ಕಾರ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಿದ್ದು ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಗೆ ಯಾವುದೇ ಬ್ಯಾಂಕ್ ಅಕೌಂಟ್ ಲಿಂಕ್ ಆಗದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಬರುವುದಿಲ್ಲ ಇದು ಯೋಜನೆಯ  ಹಣ ಪಡೆಯಲು ಉಂಟಾಗಿರುವ ಸಮಸ್ಯೆಯಾಗಿದೆ.  

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ.! ಸರ್ಕಾರದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ 2 ತಿಂಗಳ  4000 ಒಂದೇ ಬಾರಿ ಜಮಾ ಮಾಡುದಾಗಿ ಆದೇಶ.?

ಹಾಗಾದ್ರೆ ಈ ಕೂಡಲೇ ಡಿ ಬಿ ಟಿ ಚೆಕ್ ಮಾಡುವುದು ಬಹಳ ಮುಖ್ಯ.!

 ಹೌದು ಸರ್ಕಾರದಿಂದ ಯಾವುದೇ ಯೋಜನೆಯ ಹಣವನ್ನು ಪಡೆಯಬೇಕು ಎಂದರೆ ಆಧಾರ್ ಕಾರ್ಡ್ ಗೆ ಡಿ ಬಿ ಟಿ ಲಿಂಕ್ ಆಗಿರುವುದು ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಚೆಕ್ ಮಾಡಿಕೊಳ್ಳುವುದು ಬಹಳ ಮುಖ್ಯ.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ. Or Direct Link : https://resident.uidai.gov.in/bank-mapper
  •  ನಂತರ ನಿಮಗೆ ಆಧಾರ್ ಕಾರ್ಡ್ ನ ಅಫೀಷಿಯಲ್ ವೆಬ್ಸೈಟ್ ಓಪನ್ ಆಗುತ್ತದೆ
  •  ಅದರ ಮೊದಲು ಡಿ ಬಿ ಟಿ ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಲ್ಲಿ ಮೊದಲು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ
  •  ನಂತರ ಸೆಕ್ಯೂರಿಟಿಗಾಗಿ  ಕೆಲವು ನಂಬರ್ ಗಳನ್ನು ನೀಡಿರುತ್ತಾರೆ ಅದನ್ನು ಎಂಟರ್ ಮಾಡಿ ಓಟಿಪಿ ಮೇಲೆ ಕ್ಲಿಕ್ ಮಾಡಿ
  •  ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಅಲ್ಲಿಗೆ ನಮೂದಿಸಿ
  •  ಕೊನೆಯದಾಗಿ ನಿಮಗೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂಬ ಸ್ಟೇಟಸ್ ತೋರಿಸುತ್ತದೆ ಮತ್ತು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಬ್ಯಾಂಕ್ ಖಾತೆಗೆ ಬರಲಿದೆ ಎಂಬ ಮಾಹಿತಿಯನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು 

or

  •  ನಂತರ  ಪ್ಲೇ ಸ್ಟೋರ್ ನಲ್ಲಿ ಡಿ ಬಿ ಟಿ ಎಂದು ಸರ್ಚ್ ಮಾಡಿ.
  •  ಡಿ ಬಿ ಟಿ ಎಂದು ಒಂದು app  ಓಪನ್ ಆಗುತ್ತದೆ ಅದನ್ನು ಇನ್ಸ್ಟಾಲ್ ಮಾಡಿ.
  •  ನಂತರ app  ಅನ್ನು ಓಪನ್ ಮಾಡಿ ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ.
  • ನಿಮ್ಮ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.
  • ಈಗ ನಿಮ್ಮ ಹೆಸರು ಮತ್ತು ವಿಳಾಸ ಮತ್ತು  ಇನ್ನಿತರ ಮಾಹಿತಿಗಳನ್ನು ತೋರಿಸುತ್ತದೆ ಸರಿಯಾಗಿದೆಯಾ ಎಂದು ಚೆಕ್ ಮಾಡಿ ಮುಂದುವರೆಯಿರಿ
  • ಕೊನೆಯದಾಗಿ ನಿಮಗೆ Payment status,  seeding status of Aadhar in bank account,  and profile, ಈ ರೀತಿಯ ನಾಲ್ಕು ಆಪ್ಷನ್ ಗಳು  ಸಿಗುತ್ತದೆ.
  •  ಇವುಗಳಲ್ಲಿ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಸ್ಟೇಟಸ್ ತೋರಿಸುತ್ತದೆ.
  •  ಒಂದು ವೇಳೆ ಪೇಮೆಂಟ್ ಸ್ಟೇಟಸ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ತೋರಿಸದಿದ್ದರೆ ಪಕ್ಕದಲ್ಲಿರುವ  ಸೀಡಿಂಗ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಸ್ಟೇಟಸ್ ತೋರಿಸುತ್ತದೆ.

ಈ ರೀತಿ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಸುಲಭವಾಗಿ ಚೆಕ್ ಮಾಡಿಸಿಕೊಳ್ಳಬಹುದು ಒಂದು ವೇಳೆ  ಯಾವುದೇ ಬ್ಯಾಂಕ್ ಖಾತೆ  ಲಿಂಕ್ ಆಗಿಲ್ಲದಿದ್ದರೆ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಲಿಂಕ್ ಮಾಡಿಸಿಕೊಳ್ಳಿ ಇದರಿಂದ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಬಹುದು ಧನ್ಯವಾದಗಳು…

Leave a Comment