ಎಲ್ಲರಿಗೂ ನಮಸ್ಕಾರ,
ರೂಪಾಯಿ ಜಾಗತಿಕ ಕರೆನ್ಸಿ ಅಲ್ಲ, ಯಾಕೆ? ಜಾಗತಿಕ ಕರೆನ್ಸಿಗಳ ಪಟ್ಟಿಯಲ್ಲಿ ರೂಪಿ ಕಾಣದಿಲ್ಲ ಯಾಕೆ? ಈಗ ನೋಡಿ ವಿಶ್ವದಲ್ಲಿ ಅತಿ ಹೆಚ್ಚುಟ್ರಾನ್ಸಾಕ್ಷನ್ಆಗುವಂತಹ ಜಾಗತಿಕ ಕರೆನ್ಸಿಗಳ ವಿಚಾರಕ್ಕೆ ಬಂದಾಗ ಅತಿ ಹೆಚ್ಚು ದೇಶಗಳು ನಂಬುವ ಕರೆನ್ಸಿಗಳ ವಿಚಾರಕ್ಕೆ ಬಂದಾಗ ಅಮೆರಿಕನ್ ಡಾಲರ ಮೊದಲ ಸ್ಥಾನದಲ್ಲಿದೆ. ಇನ್ನುಳಿದ ಕರೆನ್ಸಿಗಳು ಯಾವ ಯಾವ ಸ್ಥಾನದಲ್ಲಿದೆ, ಎನ್ನುವುದನ್ನು ತಿಳಿಯೋಣಬನ್ನಿ.
USD – 44.15% America
EUR – 16.14% Europ
JPY – 8.40% JAPAN
GBP – 6.40% Pounds sterling
AUD -3.28% Australian
CAD – 2.52% canadian
CHF – 2.48% Swiss franc
CNH – 2.16% Chinese renminbi
HKD – 1.77% Hong Kong
NZD – 1.04% New zealand
OTHERS – 11.56
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ ಮುಂದಿನ ವರ್ಷ ಚೀನಾ ದೇಶವನ್ನು ಹಿಂದಕ್ಕೆ ಭಾರತ ಮೊದಲ ಸ್ಥಾನಕ್ಕೆ ಬರಲಿದೆ. ವಿಶ್ವದ ಅತಿ ದೊಡ್ಡ ಆರ್ಥಿಕತೆಗಳ ಪಟ್ಟಿ ಬಂದಾಗ ಆರನೇ ಸ್ಥಾನದಲ್ಲಿ ಇರುತ್ತೇವೆ, ಕೆಲವೊಮ್ಮೆ ಐದನೇ ಸ್ಥಾನದಲ್ಲಿ ಇರುತ್ತೇವೆ. ಆದರೆ ನಾವು ಇಷ್ಟೆಲ್ಲಾ ಇದ್ದರೂ ಕೂಡ, ಇಂಥ ದೇಶದರೂಪಾಯಿ ಜಾಗತಿಕ ಕರೆನ್ಸಿಗಳ ಕಾಣೋದಿಲ್ಲ ಯಾಕೆ? ಭಾರತದ ರೂಪಾಯಿ ಇಂಟರ್ನ್ಯಾಷನಲ್ ಕರೆನ್ಸಿ ಆಗಲು ವಿಶ್ವದಾದ್ಯಂತ ಫ್ರೀಯಾಗಿಆ ಕರೆನ್ಸಿ ಟ್ರೇಡ್ ಆಗಬೇಕು, ವಿಶ್ವದಾದ್ಯಂತ. ಭಾರತ ಈಗ ಆ ಪರಿಸ್ಥಿತಿಯಲ್ಲಿಲ್ಲ, ವಿಶ್ವದ ಯಾವುದೋ ಮೂಲೆಯಲ್ಲಿರುವ ಎರಡು ದೇಶಗಳು ದೇಶಗಳು ಕೂಡ ರೂಪಾಯಿಯಲ್ಲಿಟ್ರಾನ್ಸಾಕ್ಷನ್ ಮಾಡಿಕೊಳ್ಳಲು ಸಾಧ್ಯವಿರಬೇಕು, ಭಾರತಕ್ಕೆ ಸಂಬಂಧವಿಲ್ಲದೆ, ಆಗ ನಾವು ಹೇಳಬಹುದು ರೂಪಾಯಿ ಇಂಟರ್ನ್ಯಾಷನಲ್ ಕರೆನ್ಸಿ ಎಂದುಹೇಳಬಹುದು. ಉದಾಹರಣೆಗೆ ಸೌದಿ ಅರೇಬಿಯಾ ಜಪಾನ್ ದೇಶದ ಹತ್ತಿರ ಒಂದಷ್ಟು ಸರಕುಗಳನ್ನ ವ್ಯಾಪಾರಕ್ಕಾಗಿ ಖರೀದಿಸುತ್ತಾರೆ, ಆಗ ಸೌದಿ ಅರೇಬಿಯಾ ಜಪಾನ್ ಗೆ ಡಾಲರ್ ನಲ್ಲಿ ಹಣವನ್ನು ವರ್ಗಾವಣೆ ಮಾಡುತ್ತದೆ. ಯಾಕೆಂದರೆ ಡಾಲರ್ ಇಂಟರ್ನ್ಯಾಷನಲ್ ಕರೆನ್ಸಿ. ಆದರೆ ಡಾಲರ್ ಎನ್ನುವಂಥದ್ದು ಅಮೆರಿಕಾದ ಕರೆನ್ಸಿ, ಆದರೆ ಸೌದಿ ಮತ್ತು ಜಪಾನ್ ನಡುವಿನ ಈ ಹಣ ವರ್ಗಾವಣೆಯಲ್ಲಿ ಅಮೆರಿಕಕ್ಕೆ ಯಾವುದೇ ಸಂಬಂಧವಿಲ್ಲ, ಆದರೂ ಕೂಡ ಅಮೆರಿಕನ್ ಕರೆನ್ಸಿ ಬಳಕೆ ಆಗುತ್ತದೆ, ಅಂದರೆ ಇದು ಒಂದು ಇಂಟರ್ನ್ಯಾಷನಲ್ ಕರೆನ್ಸಿಗೆ ಉದಾಹರಣೆ. . ಇದಲ್ಲದೆ ಭಾರತದ IT ಕಂಪನಿಗಳು ಯುರೋಪ್ನ ಯಾವುದೋ ಒಂದು ದೇಶಕ್ಕೆ ಅಥವಾ ಆಫ್ರಿಕಾದ ದೇಶಕ್ಕೆ, ಸೇವೆಯನ್ನು ನೀಡುತ್ತಿದ್ದಾರೆ. ಈ ಸೇವೆಯನ್ನು ನೀಡಿದಕ್ಕಾಗಿ ಯುರೋಪ್ ಅಥವಾ ಆಫ್ರಿಕಾ ದೇಶವುಬಿಲ್ ಅನ್ನು ಮಾಡಲಾಗುತ್ತದೆ. ಈ ಕಂಪನಿಗಳು ಬಿಲ್ ಮಾಡುವ ಸಂದರ್ಭದಲ್ಲಿ ರೂಪಾಯಿಯಲ್ಲಿ ಬಿಲ್ ಮಾಡುವುದಿಲ್ಲ, ಈ ದೇಶಗಳು ಬಿಲ್ ಮಾಡುವ ಸಂದರ್ಭದಲ್ಲಿ ಮುಖಾಂತರವೇ ಬಿಲ್ ಮಾಡಲಾಗುತ್ತದೆ. ಬಿಲ್ ಮಾಡಿದ ಮೊತ್ತವು ಡಾಲರ್ ನ ಮುಖಾಂತರ ಬ್ಯಾಂಕಿಗೆ ಸಿಸ್ಟಮ್ ನ ಮೂಲಕ ಹಣವಾಗಿ ಪರಿವರ್ತನೆ ಮಾಡಲಾಗುತ್ತದೆ, ಅಥವಾ ಈ ಕಂಪನಿಗಳು ಡಾಲರ್ ಅಕೌಂಟ್ ನಲ್ಲಿ , ಡಾಲರ್ ನ ರೂಪದಲ್ಲಿಯೇ ಇರುತ್ತದೆ. ಅದನ್ನು ಬೇರೆ ಕಡೆ ಹಣವನ್ನು ವರ್ಗಾಯಿಸಲು ಉಪಯೋಗಿಸಲಾಗುತ್ತದೆ. ಭಾರತದ ಕರೆನ್ಸಿಯನ್ನು ಇಂಟರ್ನಾಷನಲ್ ಮಾಡಬೇಕು ಅಂತ ಅಂದ್ರೆ , ನಮ್ಮ ಕ್ಯಾಪಿಟಲ್ ಅಕೌಂಟನ್ನು ಓಪನ್ ಮಾಬೇಕಾಗುತ್ತದೆ. ಕ್ಯಾಪಿಟಲ್ ಅಕೌಂಟ್ ಅಂದ್ರೇನು? ಎರಡು ರೀತಿಯ ಅಕೌಂಟ್ಗಳನ್ನು ಪ್ರಮುಖವಾಗಿ ನೋಡ್ತಿವಿ .
Current account
Capital account
Capital account – ದೇಶದ ರಾಷ್ಟೀಯ ಮಟ್ಟದ , ನ್ಯಾಷನಲ್ ಲೆವೆಲ್ ಗೆ ಬಂದಾಗ, ಒಂದು ದೇಶದ ವಿಚಾರಕ್ಕೆ ಬಂದಾಗ, ಕ್ಯಾಪಿಟಲ್ ಅಕೌಂಟ್ ಅಂದ್ರೆ ಒಂದು ದೇಶದ ಒಟ್ಟು ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ನೋಡುವಂತಹ ಅಕೌಂಟ್
Current account – ಕರೆಂಟ್ ಅಕೌಂಟ್ ಅಂತ ಹೇಳಿದ್ರೆ ಒಂದು ದೇಶದ ಆದಾಯವನ್ನು ನೋಡುವ ಅಕೌಂಟ್ ಅಂದರೆ
ಎಷ್ಟು ನಾವು ಹೊರದೇಶಕ್ಕೆ ಹಣವನ್ನು ವರ್ಗಾವಣೆ ಮಾಡಿಕೊಳ್ತಾ ಇದ್ದಿವಿ ಆಮದನ್ನು ಮಾಡಿಕೊಳ್ಳಲ್ಲು ಮತ್ತು ಅದೇ ರೀತಿ ನಾವು ರಫ್ತು ಮಾಡಿ ವಿದೇಶಗಳಿಂದ ಆದಾಯವನ್ನು ಪಡಿತಾ ಇದೀವಿ ಅಂದ್ರೆ ದೇಶದ ದುಡ್ಡು ಹೊರಗೆ ಹೋಗ್ತಾ ಇದೆ ಮತ್ತು ದೇಶಕ್ಕೆ ಆದಾಯ ದೇಶಕ್ಕೆ ಬರ್ತಾ ಇದೆ, ಅದನ್ನು ನೋಡುವುದೇ ಕರೆಂಟ್ ಅಕೌಂಟ್.
ಕ್ಯಾಪಿಟಲ್ ಅಕೌಂಟನ್ನು ನಾವು ತೆರೆಯಬೇಕಾಗುತ್ತದೆ, ಯಾವುದೇ ಅಡೆಚಣೆ ಮತ್ತು ನಿರ್ಬಂಧ ವಿಲ್ಲದೆ ರೂಪಾಯಿ ದೇಶಕ್ಕೆ ಬರುವುದು ಮತ್ತು ಹೋಗುವುದು ಆಗಬೇಕಾಗುತ್ತದೆ. ಅಷ್ಟು ಮಾತ್ರವಲ್ಲದೆ ಈ ರೂಪಾಯಿಯನ್ನು ಬಳಸಿ ಜಗತ್ತಿನಾದ್ಯಂತ ಶೇರುಗಳನ್ನು, ಬಾಂಡ್ ಗಳನ್ನು , ಸ್ಟಾಕ್, ರಿಯಲ್ ಎಸ್ಟೇಟ್ ಈ ಎಲ್ಲಾ ಖರೀದಿಗಳನ್ನು ಕೂಡ ಮಾಡಲು ಸಾಧ್ಯವಾಗಬೇಕಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಕರೆನ್ಸಿಯ ಮೇಲೆ ನಂಬಿಕೆ ಇರಬೇಕು. ಈಗ ಅಮೆರಿಕನ್ ಡಾಲರ್ ನಲ್ಲಿ ಪೇಮೆಂಟ್ ಅನ್ನು ತೆಗೆದುಕೊಂಡರೆ, ಆ ಡಾಲರ್ ತೆಗೆದುಕೊಂಡು ಜಗತ್ತಿನ ಜಗತ್ತಿನ ಯಾವುದೇ ಕಡೆಯಾದರೂ ವಸ್ತುವನ್ನು ಖರೀದಿಸಬಹುದಾಗಿದೆ. ಏಕೆಂದರೆ ಡಾಲರ್ ಜಗತ್ತಿನಾದ್ಯಂತ ಚಲಾವಣೆಯಲ್ಲಿದೆ ಹಾಗಾಗಿ ಚೀನಾ ಮತ್ತು ಇತರ ದೇಶಗಳು ಡಾಲರ್ ಅನ್ನು ಸಂಗ್ರಹಣೆ ಮಾಡಲು ಬಯಸುತ್ತದೆ . ಏಕೆಂದರೆ ಡಾಲರನ್ನು ಸಂಗ್ರಹಣೆ ಮಾಡಿದಾಗ,ನಾವು ಎಲ್ಲಿ ಬೇಕಾದರು, ಏನಾದರು ಖರೀದಿ ಮಾಡಬಹುದು. ಅಮೇರಿಕಾ ಬಳಿ ಹೋಗಿ ನೋಡಿ ನೀವು ಜಾರಿಗೆತಂದ ಡಾಲರ್ ನನ್ನ ಬಳಿ ಇದೆ, ಅದಕ್ಕೆ ತಕ್ಕಂತ ವಸ್ತುಗಳನ್ನು ಕೊಡಿ ಎಂದರೆ, ಅಮೆರಿಕ ದೇಶಕ್ಕೆಕೊಡುವ ಸಾಮರ್ಥ್ಯವಿದೆ. ಅಂದರೆ ಆ ಮಟ್ಟಿಗೆ ನಂಬಿಕೆ ಸೃಷ್ಟಿಯಾಗ ಬೇಕಾಗುತ್ತದೆ . ಅದೇ ರೀತಿ ಭಾರತದ ಕರೆನ್ಸಿಯೂ ಕೂಡ ಇಂಟರ್ನ್ಯಾಷನಲ್ ಕರೆನ್ಸಿ ಆಗಬೇಕಾದರೆ ನಂಬಿಕೆ ಇರಬೇಕು. ಇದೇ ರೀತಿ ಅಷ್ಟು ಮಾತ್ರವಲ್ಲದೆ ಈ ರುಪಾಯಿಯನ್ನು ಜಾರಿಗೊಳಿಸುತ್ತಿರುವುದು ಭಾರತ ಆಗಿರುವುದರಿಂದ, ಭಾರತದಲ್ಲಿ ಹಣ ದುಬ್ಬರ ಕಮ್ಮಿ ಇರಬೇಕಾಗುತ್ತದೆ. ಅಂದರೆ ಭಾರತ ಮುದ್ರಿಸುವ ನೋಟಿಗೆ ಬೇರೆ ದೇಶದಲ್ಲಿ ಅದೇ ಬೆಲೆ ಇರಬೇಕಾಗುತ್ತದೆ. ದಿನ ಬೆಳಿಗ್ಗೆ ಆದರೆ ನೋಟಿನ ಬೆಲೆಯಲ್ಲಿ ಏರಿಳೀತ ಆಗಬಾರದು. ಹೆಚ್ಚಾಗೋದು ಅಥವಾ ಕಮ್ಮಿ ಆಗೋದು ಆಗ್ಬಾರ್ದೂ, ಅಥವಾ ತೀರಾ ಬೀಳೋದು ಆಗ್ಬಾರ್ದು, ಇದರಿಂದಾಗಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾರತದ ಕರೆನ್ಸಿ ಜಾರಿಯಾಗುತ್ತದೆ.
ಡಾಲರ್ ಗೆ ಬೈ ರೂಪಾಯಿಗೆ ಹಾಯ್
ಹೌದು ಭಾರತದ ಕರೆನ್ಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಲಾವಣೆ ಆಗಲು ಬಹಳ ವರ್ಷಗಳಿಂದ ಪ್ರಯತ್ನವನ್ನು ಮಾಡುತ್ತಿದೆ. ಆದರೆ ನಮ್ಮ ಬಳಿ ಅಷ್ಟೊಂದು ಪ್ರಮಾಣದ ಸರಕುಗಳೂ ಇರಲಿಲ್ಲ, ಆದರೆ ಈಗ ನಮ್ಮ ದೇಶವು ಸಣ್ಣದಾಗಿ ಹೆಜ್ಜೆಯನ್ನು ಇಡಲು ಆರಂಭಿಸಿದೆ.
1.ಭಾರತದಿಂದ ಹೊರಗೆ ಕಾಲಿಡಬೇಕಾದರೆ ಕರೆನ್ಸಿ ಬದಲಾಯಿಸಲು ಹೇನಾಗಡಬೆಕಿದ್ದ ಕಷ್ಟಕ್ಕೆ ಇನ್ನು ಕೆಲವೇ ವರ್ಷಗಳಲ್ಲಿ ಗುಡ್ ಬೈ ಹೇಳಬಹುದಾಗಿದೆ.
2.ಒಂದೊಂದೇ ಹಂತವಾಗಿ ಎಲ್ಲಾ ದೇಶಗಳು ಭಾರತದ ರೂಪಾಯಿಯನ್ನು ತಮ್ಮ ದೇಶಗಳ ವ್ಯವಹಾರದಲ್ಲಿ ಸೇರಿಸಿಕೊಳ್ಳಲು ಪ್ರಾರಂಭಿಸಿದೆ.
3.ಈಗಾಗಲೇ 18 ದೇಶಗಳಲ್ಲಿ ರೂಪಾಯಿ ಹಿಡಿದೆ ವ್ಯವಹಾರ ಮಾಡಬಹುದಾಗಿದೆ.
4.ಯುಕೆ, ನ್ಯೂಜಿಲ್ಯಾಂಡ್,ಜರ್ಮನಿ,ಇಸ್ರೇಲ್,ಮಲೇಷಿಯಾ,ಸಿಂಗಾಪುರ,ಸೇರಿದಂತೆ ಘಟಾನುಘಟಿ ದೇಶಗಳೇ ಇ ನಿರ್ಣಾಯವನ್ನು ಮಾಡಿದೆ.