ಎಲ್ಲರಿಗೂ ನಮಸ್ಕಾರ. ಕರ್ನಾಟಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನ ಭಾಗ್ಯ ಯೋಜನೆಗಳಲ್ಲಿ ಸಮಸ್ಯೆಗಳಿದ್ದು, ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸುವಂತೆ ಡಿ ಸಿಎಂ ಡಿಕೆ ಶಿವಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ, ಹೌದು ಈಗಾಗಲೇ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಇನ್ನು ಕೊನೆಯ ಯುವನಿಧಿ ಯೋಜನೆ ಮಾತ್ರ ಬಾಕಿ ಉಳಿದಿದ್ದು ಸದ್ಯ ಈಗಾಗಲೇ ಜಾರಿಯಾಗಿರುವ ನಾಲ್ಕು ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳಲ್ಲಿ ಅತಿ ಹೆಚ್ಚು ಸಮಸ್ಯೆಗಳು ಕಂಡುಬರುತ್ತವೆ ಹಾಗಾಗಿ ಸ್ವತಹ ಡಿಕೆ ಶಿವಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯನ್ನು ಶೀಘ್ರದಲ್ಲಿ ಸರಿಪಡಿಸಲು ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: PM Kisan ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಆರಂಭ.! ಫಲಾನುಭವಿಗಳ ಲಿಸ್ಟ್ ಇಲ್ಲಿದೆ.?
ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಗ್ಯಾರೆಂಟಿ ಯೋಜನೆಗಳಲ್ಲಿ ಬಾರಿ ಸಮಸ್ಯೆ.!
ಕರ್ನಾಟಕ ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ನಾಲ್ಕು ಗ್ಯಾರಂಟಿ ಯೋಜನೆಗಲ್ಲಿ ಅತಿ ಹೆಚ್ಚು ಸಮಸ್ಯೆಗಳು ಕಂಡುಬರುತ್ತಿರುವ ಯೋಜನೆಗಳೆಂದರೆ ಅದು ಗೃಹಲಕ್ಷ್ಮಿ ಯೋಜನೆ ಗೃಹಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ, . ಹೌದು ಈ ಮೂರು ಯೋಜನೆಗಳನ್ನು ಕೂಡ ರಾಜ್ಯದ ಜನತೆಗೆ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿದೆ.
- ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆ: ಗೃಹಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಫಲಾನುಭವಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗಿತ್ತು ಆದರೆ ಈಗಾಗಲೇ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದರೂ ಕೇವಲ ಎರಡು ತಿಂಗಳ ಹಣವನ್ನು ಮಾತ್ರ ನೀಡಲಾಗಿದೆ ಅದರಲ್ಲೂ ಕೂಡ ಇನ್ನೂ ಕೂಡ ಹಲವು ಮಹಿಳೆಯರಿಗೆ ಮೊದಲನೇ ಕತ್ತಿನ ಹಣವೇ ಬಂದಿಲ್ಲ, ಸದ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ DBT ಲಿಂಕ್ ಮಾಡಿಸಬೇಕು, ಫಲಾನುಭವಿಗಳ ಲಿಸ್ಟ್ ನಲ್ಲಿ ಹೆಸರನ್ನು ಚೆಕ್ ಮಾಡಬೇಕು, ಹಾಗೆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು ಎಂಬ ಎಲ್ಲಾ ನಿಯಮಗಳನ್ನು ಪಾಲಿಸಿದರು ಕೂಡ ಹಣ ಬಂದಿಲ್ಲ ಎಂಬುದು ಬಹಳಷ್ಟು ಮಹಿಳೆಯರ ಸಮಸ್ಯೆಯಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಎರಡನೆಯದಾಗಿ ಗೃಹ ಜ್ಯೋತಿ ಯೋಜನೆ: ರಾಜ್ಯದಲ್ಲಿ ಈ ಗೃಹಜ್ಯೋತಿ ಯೋಜನೆಯಿಂದಲೂ ಕೂಡ ಸಾಕಷ್ಟು ಜನರಿಗೆ ಸಮಸ್ಯೆ ಉಂಟಾಗುತ್ತದೆ ರಾಜ್ಯ ಸರ್ಕಾರವು ಮೊದಲು ಪ್ರತಿಯೊಂದು ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ಎಂದು ತಿಳಿಸಿತ್ತು ಆದರೆ ಯೋಜನೆಯ ಚಾಲನೆ ಸಮಯದಲ್ಲಿ ಇದಕ್ಕೂ ಕೂಡ ಕೆಲವು ನಿಯಮಗಳನ್ನು ತಿಳಿಸಿದ್ದು ಈಗಾಗಲೇ ಒಂದು ವರ್ಷದಿಂದ ಬಳಸುತ್ತಿರುವ ವಿದ್ಯುತ್ ನ ಆಧಾರದ ಮೇಲೆ 10 ಯೂನಿಟ್ ಹೆಚ್ಚಿನ ವಿದ್ಯುತ್ ನೀಡಲಾಗುತ್ತದೆ ಎಂದು ತಿಳಿಸಿದೆ ಆದರೆ ಕೆಲವು ಗೃಹಜ್ಯೋತಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸಿಗದೆ ಪ್ರತಿ ತಿಂಗಳು ಮೊದಲಿಗಿಂತ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತಿದೆ ಈ ರೀತಿ ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಮೂರನೇಯದಾಗಿ ಅನ್ನ ಭಾಗ್ಯ ಯೋಜನೆ: ಅನ್ನ ಭಾಗ್ಯ ಯೋಜನೆಯನ್ನು ಕೂಡ ಸರ್ಕಾರವೇ ಬಹುದೊಡ್ಡ ಬದಲಾವಣೆಯನ್ನು ಮಾಡಿದೆ ಗ್ಯಾರಂಟಿ ಯೋಜನೆ ನೀಡುವ ಸಮಯದಲ್ಲಿ 10 ಕೆಜಿ ಪ್ರತಿ ಸದಸ್ಯನಿಗೆ ಅಕ್ಕಿ ನೀಡುವುದಾಗಿ ಆದೇಶ ನೀಡಿದ ಕಾಂಗ್ರೆಸ್ ಪಕ್ಷವು ನಂತರ ಅಕ್ಕಿಯ ಕೊರತೆಯಿಂದ 5 ಕೆಜಿ ಅಕ್ಕಿ ಮತ್ತು 5 ಕೆ.ಜಿ ಅಕ್ಕಿ ಬದಲಾಗಿ ಹಣವನ್ನು ಬ್ಯಾಂಕ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದೆ ಆದರೆ ಕೇಂದ್ರ ಸರ್ಕಾರದಿಂದ ಬರುತ್ತಿರುವ 5 ಕೆಜಿ ಅಕ್ಕಿಯನ್ನು ಮಾತ್ರ ಸರ್ಕಾರ ನೀಡುತ್ತಿದೆ ಇನ್ನು ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಬದಲಿನ ಹಣ ಕೂಡ ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿಲ್ಲ ಇನ್ನು ಈ ಬಗ್ಗೆ ಸರ್ಕಾರದಿಂದಲೂ ಕೂಡ ಯಾವುದೇ ರೀತಿಯ ಮಾಹಿತಿ ಸಿಗುತ್ತಿಲ್ಲ ಇದು ರಾಜ್ಯದಲ್ಲಿ ಬಹಳಷ್ಟು ಜನರಿಗೆ ಸಮಸ್ಯೆಯಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಇದನ್ನು ಓದಿ: PM Kisan ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಆರಂಭ.! ಫಲಾನುಭವಿಗಳ ಲಿಸ್ಟ್ ಇಲ್ಲಿದೆ.?
ಸಮಸ್ಯೆಗಳನ್ನು ಶೀಘ್ರದಲ್ಲಿ ಸರಿಪಡಿಸಲು ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಖಡಕ್ ಸೂಚನೆ.?
ಹೀಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಗಳಲ್ಲಿ ಜನರಿಗೆ ಬಾರಿ ಸಮಸ್ಯೆ ಉಂಟಾಗುತ್ತಿದೆ ಅಲ್ಲದೆ ಈ ವಿಷಯವಾಗಿ ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಯೋಜನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಇಂದು ಭೇಟಿ ಮಾಡಿ ಯೋಜನೆಗಳ ಸಮಸ್ಯೆಗೆ ಕಾರಣಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಕಡಕ್ ಸೂಚನೆ ನೀಡಿದ್ದಾರೆ. ಹಾಗೆ ನಿಮಗೂ ಈ ಯೋಜನೆಗಲ್ಲಿ ಸಮಸ್ಯೆ ಇದ್ದರೆ 81475500500 ವಾಟ್ಸಪ್ ಮೂಲಕ ಸಮಸ್ಯೆಯನ್ನು ತಿಳಿಸಲು ಸೂಚಿಸಿದ್ದಾರೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: PM Kisan ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಆರಂಭ.! ಫಲಾನುಭವಿಗಳ ಲಿಸ್ಟ್ ಇಲ್ಲಿದೆ.?