BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

WhatsApp Group Join Now
Telegram Group Join Now

BPL card application: ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ ರಾಜ್ಯದಲ್ಲಿ ಈಗಾಗಲೇ ಬಹುತೇಕ ಜನರು ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಮತ್ತು ಬಿಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ ಅಂತಹ ಜನರಿಗೆ ಇದೀಗ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಈ ಹಿಂದೆ ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಯನ್ನು ಸ್ಥಗಿತಗೊಳ್ಳಿಸಲಾಗಿತ್ತು ಆದರೆ ಇದೀಗ ಮತ್ತೆ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭವಾಗಿದ್ದು ನೀವು ಕೂಡ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾಗಿದ್ದರೆ ಆನ್ಲೈನ್ ಮೂಲಕ ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ ಈ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ ಬಿಪಿಎಲ್ ಕಾಡಿಗೆ ಅರ್ಜಿ ಸಲ್ಲಿಸುವುದರ ಬಗ್ಗೆ ತಿಳಿದುಕೊಳ್ಳಿ.

ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಪ್ರಾರಂಭ

 ಸದ್ಯ ಈ ಬಗ್ಗೆ  ಸರ್ಕಾರದಿಂದ ಆದೇಶ ಹೊರಡಿಸಿದ್ದು ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಅಂದರೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿರುವ ಜನರು ಅರ್ಜಿ ಸಲ್ಲಿಸಬಹುದು ಎಂಬ ಆದೇಶ ಹೊರಡಿಸಿದ್ದು ಈ ಹಿಂದೆ ರಾಜ್ಯದಲ್ಲಿ  ವಿಧಾನಸಭಾ ಚುನಾವಣೆಯ ಕಾರಣ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ತಿದ್ದುಪಡಿಯನ್ನು ಸಹ ನಿಲ್ಲಿಸಲಾಗಿತ್ತು ಆದರೆ ಇದೀಗ ರಾಜ್ಯದ ಹೊಸ ಸರ್ಕಾರವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಈಗಾಗಲೇ ರಾಜ್ಯ ಸರ್ಕಾರವು ಬಿಪಿಎಲ್ ಪಡಿತರ ಚೀಟಿ ಕುರಿತಂತೆ ಮಾಹಿತಿ ನೀಡಿದೆ.

ಅಲ್ಲದೆ ಈಗಾಗಲೇ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ರಾಜ್ಯದ ಎಲ್ಲಾ ಕಾಯಂ ನಿವಾಸಿಗಳಿಗೂ ಸರ್ಕಾರ ಐದು ಬರವಸೆಗಳನ್ನು ಕೂಡ ನೀಡಲು ಮುಂದಾಗಿದ್ದು ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿ ಯಾರು ಎಂದು ರೇಷನ್ ಕಾರ್ಡ್ ನಲ್ಲಿ ನಾವು ಖಚಿತಪಡಿಸಿಕೊಳ್ಳಬಹುದು ಮತ್ತು ಒಂದು ವೇಳೆ ನೀವೇನಾದರೂ ಬಿಪಿಎಲ್ ಪಡಿತರ ಚೀಟಿಯಲ್ಲಿ ಮನೆಯ ಹೆಸರನ್ನು ತೆಗೆಯುವುದು ಅಥವಾ ತಿದ್ದುಪಡಿ ಮಾಡಿಸುವುದು ಮಾಡಬೇಕು ಎಂದರೆ ಇದು ಒಳ್ಳೆಯ ಸಮಯವಾಗಿದೆ ಏಕೆಂದರೆ ಬಿಪಿಎಲ್ ಕಾರ್ಡ್ ನಲ್ಲಿ ಯಾವ ಮಹಿಳೆಯ ಹೆಸರು ಇರುತ್ತದೆಯೋ ಅವರೇ ಮನೆ ಒಡತಿ ಎಂದು ಆಧರಿಸಿ ಅವರಿಗೆ ಮಾತ್ರ ಪ್ರತಿ ತಿಂಗಳು 2000 ದಂತೆ ಸರ್ಕಾರ ಹಣ ನೀಡುವುದಾಗಿ ತಿಳಿಸಿರುವುದರಿಂದ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕೆಂದುಕೊಂಡಿದ್ದಲ್ಲಿ ಈ ಕೂಡಲೇ ನೀವು ಅರ್ಜಿ ಸಲ್ಲಿಸಬಹುದು. 

ಇದನ್ನುಓದಿ: SSLC ಪೂರಕ ಪರೀಕ್ಷೆ ಡೇಟ್ ಫಿಕ್ಸ್. ಪೂರಕ ಪರೀಕ್ಷೆಯ ಟೈಮ್ ಟೇಬಲ್ ಬಿಡುಗಡೆ.?

ಬಿಪಿಎಲ್ ರೇಷನ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ 

ಈಗಾಗಲೇ ರಾಜ್ಯ ಸರ್ಕಾರ ಕೆಲವು ಗ್ಯಾರೆಂಟಿಗಳನ್ನು ಆದೇಶ ಮಾಡಿದ್ದು ಆ ಗ್ಯಾರೆಂಟಿಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಮುಖ್ಯವಾಗಿದೆ ಅಲ್ಲದೆ ಈಗಾಗಲೇ ತಿಳಿಸಿದ ಹಾಗೆ ಮನೆ ಒಡತಿಯರಿಗೆ ಪ್ರತಿ ತಿಂಗಳು 2000 ನೀಡಲು ಈ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ನಲ್ಲಿ ಇರುವ ಮಹಿಳೆಯರಿಗೆ ಮಾತ್ರ ಹಣ ನೀಡಲಿದೆ ಅದೇ ರೀತಿ ಇನ್ನಿತರ ಗ್ಯಾರಂಟಿಗಳನ್ನು ಪಡೆಯಲು ಅಂದರೆ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ,  ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ,  ಈ ರೀತಿಯ ಕೆಲವು ಯೋಜನೆಗಳ ಉಪಯೋಗ ಪಡೆಯಬೇಕು ಎಂದರೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಹೆಚ್ಚೆಯಿದೆ.

 ಮುಖ್ಯವಾಗಿ ಸರ್ಕಾರವು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಸಾರ್ವಜನಿಕರಿಗೆ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯನಿಗೆ 10 ಕೆಜಿ ಉಚಿತ ಅಕ್ಕಿ ಮತ್ತು ಕೆಲವು ಧಾನ್ಯಗಳು ಅಂದರೆ ಗೋಧಿ ಮತ್ತು ರಾಗಿ ಮುಂತಾದ ಧಾನ್ಯಗಳನ್ನು ಕೊಡಲು ಮುಂದಾಗಿದ್ದು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಲ್ಲಿ ಸರ್ಕಾರದಿಂದ ಉಪಯೋಗಗಳನ್ನು ಮತ್ತು ಮುಂತಾದ  ಯೋಜನೆಗಳಿಗೆ ನೆರವಾಗುತ್ತದೆ ಎಂದು ತಿಳಿದಿದ್ದು ಹಾಗಾಗಿ ಬಹುತೇಕ ಜನ ಇನ್ನೂ ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿಲ್ಲದೆ ಇರುವ ಕಾರಣ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೊಸ ಬಿಪಿಎಲ್ ಪಡಿತರ ಚೀಟಿಗೆ ಈಗಲೇ ಅರ್ಜಿ ಸಲ್ಲಿಸಿ.

ಇದೀಗ ರಾಜ್ಯದಲ್ಲಿ  ಹೊಸ ಬಿಪಿಎಲ್ ಕಾಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದು ಇವರಿಗೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಯನ್ನು ಸ್ಥಗಿತಗೊಳಿಸಿದ ಕಾರಣ ಇದೀಗ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಬಿಪಿಎಲ್ ಕಾರ್ಡ್ ಬಳಕೆಯಿಂದ ಕೆಲವು ಹೊಸ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಇದೀಗ ಅರ್ಹರಿಗೆ ಯೋಜನೆ ಸಿಗಬೇಕು ಎಂಬ ದೃಷ್ಟಿಯಿಂದ ಅಕ್ರಮವಾಗಿ ತೆಗೆದುಕೊಂಡಿರುವ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದ್ದು ಮತ್ತು ಎಲ್ಲಾ ಅರ್ಹತೆಗಳನ್ನು ಹೊಂದಿರುವ ಜನರ ಬಿಪಿಎಲ್ ಕಾರ್ಡನ್ನು ಎಪಿಎಲ್ ಕಾರ್ಡಿಗೆ ವರ್ಗಾಯಿಸಲು ಮುಂದಾಗಿದೆ ಈ ಕಾರಣ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಒಂದು ಅವಕಾಶ ನೀಡಿದ್ದು ಜೂನ್ 30 ಕೊನೆಯ ದಿನಾಂಕವಾಗಿದೆ ಇದರ  ಒಳಗಾಗಿ ಅರ್ಹ ವ್ಯಕ್ತಿಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಿ ಸರ್ಕಾರದ ಪ್ರಯೋಜನಗಳನ್ನು ನೀಡಲು ನಿರ್ಧರಿಸಿದೆ.

 ಈಗಾಗಲೇ ರಾಜ್ಯ ಸರ್ಕಾರ ಉಚಿತ 10 ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದದೆ ಇರುವವರು ಅರ್ಜಿ ಸಲ್ಲಿಸಿ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಕಾಯುತ್ತಿದ್ದು ಅಂತಹ ವ್ಯಕ್ತಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ ಈಗಾಗಲೇ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಹೊಸ ಬಿಪಿಎಲ್ ಕಾಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು ಇವರಿಗೆ ಸುಮಾರು 78,000ಕ್ಕೂ ಹೆಚ್ಚು ಜನರು ಹೊಸ ಬಿಪಿಎಲ್  ಕಾರ್ಡಿಗೆ ಅರ್ಜಿ ಸಲ್ಲಿಸಿದ್ದು ಸುಮಾರು 75,000ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ಆಹಾರ ಇಲಾಖೆ ಸ್ವೀಕರಿಸಿದೆ.  ಅಲ್ಲದೆ ಇವರಿಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ಇನ್ನು ಕೆಲವು ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡಿಗೆ ವರ್ಗಾಯಿಸಿದೆ . ಆದ್ದರಿಂದ ಅರ್ಹ  ವ್ಯಕ್ತಿಗಳು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಾದರೆ ಈ ಕೂಡಲೇ ಅರ್ಜಿ ಸಲ್ಲಿಸಬಹುದು. 

ಇದನ್ನುಓದಿ: SSLC ಪೂರಕ ಪರೀಕ್ಷೆ ಡೇಟ್ ಫಿಕ್ಸ್. ಪೂರಕ ಪರೀಕ್ಷೆಯ ಟೈಮ್ ಟೇಬಲ್ ಬಿಡುಗಡೆ.?

ಹೊಸ ಬಿಪಿಎಲ್ ಕಾರ್ಡಿಗೆ ಬೇಕಾಗುವ ಮುಖ್ಯ ದಾಖಲೆಗಳು. 

ರಾಜ್ಯದಲ್ಲಿ ಯಾರೆಲ್ಲಾ ಹೊಸ ಬಿಪಿಎಲ್  ಕಾರ್ಡಿಗೆ ಅಂದರೆ ಪವಿತ್ರ ಚೀಟಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದೀರಿ ಅಂತಹ ಜನರಿಗೆ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು. 

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  •  ವೋಟರ್ ಐಡಿ ಕಾರ್ಡ್
  •  ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
  •  ಆದಾಯ ಮತ್ತು ಜಾತಿ ಪ್ರಮಾಣ ಪತ್ರ
  •  ರೇಷನ್ ಕಾರ್ಡ್ ನ ಅರ್ಜಿ ನಮೂನೆ

 ಈ ಎಲ್ಲಾ ದಾಖಲೆಗಳನ್ನು ಅರ್ಜಿದಾರನು ಹೊಂದಿದ್ದಲ್ಲಿ ನೇರವಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. 

 ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ

 ಸರ್ಕಾರ ದಿಂದ ಇದೀಗ ಜನರಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಿದ್ದು ಅರ್ಜಿ ಸಲ್ಲಿಸುವವರು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹೊಸ ಅರ್ಜಿ ನಮೂನೆಯಲ್ಲಿ ಬಂದಿರುವ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಡಿಜಿಟಲ್ ಸೇವಾ ಕೇಂದ್ರ ಅಥವಾ ಸೈಬರ್ ಸೆಂಟರ್ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಲ್ಲದಿದ್ದರೆ ನಿಮ್ಮ ತಾಲೂಕು ಕಚೇರಿಗೆ ಹೋಗಿ ಅಲ್ಲಿ ಆಹಾರ ಇಲಾಖೆಗೆ ಭೇಟಿ ನೀಡಿ ಅಲ್ಲಿ ನೇರವಾಗಿ ನಿಮ್ಮ ಪಡಿತರ ಚೀಟಿ ಅರ್ಜಿ ಸಲ್ಲಿಸಿ ಬರಬಹುದು ಅರ್ಜಿ ಸಲ್ಲಿಸಿದ ಎರಡು ತಿಂಗಳ ಬಳಿಕ ಅರ್ಜಿದಾರರಿಗೆ ರೇಷನ್ ಕಾರ್ಡ್ ಅರ್ಜಿ ಸ್ಟೇಟಸ್ ಕುರಿತು ಮಾಹಿತಿ ಸಿಗಲಿದೆ ನಂತರ ನಿಮಗೆ ಕೆಲವೇ ದಿನಗಳಲ್ಲಿ ರೇಷನ್ ಕಾರ್ಡ್ ನೀಡಲಾಗುತ್ತದೆ ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಾರೆ ನಿಮಗೆ ರೇಷನ್ ಕಾರ್ಡ್ ನೀಡುವುದಿಲ್ಲ ಎಚ್ಚರ.

Leave a Comment