ಎಲ್ಲರಿಗೂ ನಮಸ್ಕಾರ,
ಕರ್ನಾಟಕ ರಾಜ್ಯದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಕರ್ನಾಟಕ ಸರ್ಕಾರವು ಪ್ರತಿ ವರ್ಷ ನಿರುದ್ಯೋಗವನ್ನು ಹೋಗಲಾಡಿಸಲು ನಿರುದ್ಯೋಗಿಗಳಿಗೆ ಸರ್ಕಾರಿ ಉದ್ಯೋಗಗಳನ್ನು ಬಿಡುಗಡೆ ಮಾಡುತ್ತದೆ. ಈ ಸಂದರ್ಭದಲ್ಲಿ ಉದ್ಯೋಗ ಅವಶ್ಯಕತೆ ಇರುವ ಯುವಕ ಯುವತಿಯರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸರ್ಕಾರಿ ಹುದ್ದೆಗಳಿಗೆ ಸರ್ಕಾರವು ಕೆಲವು ನಿಬಂಧನೆಗಳನ್ನು ವಿಧಿಸಿರುತ್ತದೆ. ನಿಬಂಧನೆ, ನಿಯಮ, ವಿದ್ಯಾರ್ಹತೆ, ವಯಸ್ಸು, ಸ್ಥಳ, ಮತ್ತು OBC ಹಾಗೂ SC/ST ಅಭ್ಯರ್ಥಿಗಳಿಗೆ ಇರುವ ವಯಸ್ಸಿನ ಮಿತಿಗಳ ಬಗ್ಗೆ, ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ಕರ್ನಾಟಕ ರಾಜ್ಯದಲ್ಲಿ 1,700 ಕಿಂತ ಅಧಿಕ ಹುದ್ದೆಗಳು ಖಾಲಿ ಇರುತ್ತವೆ. ಮತ್ತು ಇಡೀ ಭಾರತದಲ್ಲಿ 30000 ಕಿಂತ ಅಧಿಕ ಹುದ್ದೆಗಳು ಖಾಲಿ ಇರುತ್ತವೆ.
ಅಂಚೆ ಇಲಾಖೆ ಹುದ್ದೆಗಳಿಗೆ ಯಾವ ರೀತಿಯಾಗಿ ಆನ್ಲೈನ್ ನ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು, ಮತ್ತು ಈ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದವರಿಗೆ ಉತ್ತಮ ವೇತನವನ್ನು ನೀಡಲಾಗುತ್ತದೆ. ಮತ್ತು ಇದು ಸರ್ಕಾರಿ ಹುದ್ದೆಯಾಗಿದೆ, ಅರ್ಜಿಯನ್ನು ಸಲ್ಲಿಸಿ ಅಂಚೆ ಇಲಾಖೆ ಹುದ್ದೆಗೆ ಆಯ್ಕೆಯಾದವರಿಗೆ ಯಾವುದೇ ದೈಹಿಕ ಮತ್ತು ಲಿಖಿತ ಪರೀಕ್ಷೆಗಳಿರುವುದಿಲ್ಲ. ಇದರಿಂದ ಅಭ್ಯರ್ಥಿಗಳು ಸುಲಭವಾಗಿ ಅಂಚೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ. ನೆರವಾಗಿ ಸಂದರ್ಶನವನ್ನು ಮಾಡಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಅಂಚೆ ಇಲಾಖೆ ಹುದ್ದೆಯ ಅಧಿ ಸೂಚನೆ ಅಥವಾ ಅರ್ಜಿ ಪ್ರಾರಂಭವಾದ ದಿನಾಂಕ 03/08/2023 ಮತ್ತು ಕೊನೆಯ ದಿನಾಂಕ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗೆ 23/08/2023ರ ವರೆಗೆ ಅವಕಾಶ ಇರುತ್ತದೆ. ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ನ ಮುಖಾಂತರರಿಜಿಸ್ಟರ್ ಆಗಿ, ಆನ್ಲೈನ್ನ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಮತ್ತುಅರ್ಜಿಯನ್ನು ಸಲ್ಲಿಸುವವರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ, ಏಕೆಂದರೆ ಕೊನೆ ದಿನಾಂಕದಂದು ಸರ್ವರ್ ಕೆಲಸ ಮಾಡದೆ ಇರಬಹುದು, ಹಾಗಾಗಿ ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ.ಕೆಳಗೆ ನೀಡಿರುವ ವೆಬ್ಸೈಟ್ ಲಿಂಕನ್ನು ಉಪಯೋಗಿಸಿಕೊಂಡು ಆನ್ಲೈನ್ ನ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Website link : www.https://indiapostgdsonline.gov.in
ವೆಬ್ಸೈಟ್ನ ಮುಖಾಂತರ ಅರ್ಜಿಯನ್ನು ಸಲ್ಲಿಸುವಾಗ ಬೇಕಾಗುವ ದಾಖಲೆಗಳು
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ಅಭ್ಯರ್ಥಿಯ ಹೆಸರು (ಸೆಕೆಂಡರಿ ಶಾಲೆಯ ಪಾಸ್ ಪ್ರಮಾಣ ಪತ್ರದ ಪ್ರಕಾರ)ಗಮನಿಸಿ ಯಾವುದೇ ವಿಚಲನವು ಉಮೇದುವಾರಿಕೆಯನ್ನು ರದ್ದುಗೊಳಿಸುವುದಕ್ಕೆ ಕಾರಣವಾಗಬಾರದು.
- ತಂದೆಯ ಹೆಸರು / ತಾಯಿಯ ಹೆಸರು( ಸೆಕೆಂಡರಿ ಶಾಲೆಯ ಪಾಸ್ ಪ್ರಮಾಣ ಪತ್ರದ ಪ್ರಕಾರ )
- ಹುಟ್ಟಿದ ದಿನಾಂಕ
- ಲಿಂಗ
- ಸಮುದಾಯ
- ಮಾಧ್ಯಮಿಕ ಶಾಲೆ ಉತ್ತೀರ್ಣರಾದ ವೃತ್ತ
- ಮಾಧ್ಯಮಿಕ ಶಾಲೆಯಲ್ಲಿ ಉತ್ತೀರ್ಣರಾದ ವರ್ಷ
- ಕೆಳಗೆ ತೋರಿಸಿರುವ ಪಠ್ಯವನ್ನು ನಮೂದಿಸಿ.
ಈ ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ನೀವು ಕೆಳಗೆ ಇರುವ ರಿಜಿಸ್ಟರ್( ಸಲ್ಲಿಸು) ಮೇಲೆ ಕ್ಲಿಕ್ ಮಾಡಿ. ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
03/08/2023 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ ಮತ್ತು23/08/2023 ಕೊನೆಯ ದಿನಾಂಕ ವಾಗಿರುತ್ತದೆ. ಅಷ್ಟರಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿಯನ್ನು ತಿದ್ದುಪಡಿ ಮಾಡಲು24/08/2023 ರಿಂದ26/08/2023 ಒಳಗಡೆ ತಿದ್ದುಪಡಿಯನ್ನು ಮಾಡಬಹುದಾಗಿದೆ. ಈ ಎರಡು ದಿನಗಳಲ್ಲಿ ಅರ್ಜಿಯಲ್ಲಿ ನೀವು ತಿದ್ದುಪಡಿ ಮಾಡಬೇಕಾಗಿರುವುದನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಖಾಲಿ ಇರುವ ಪೋಸ್ಟ್
Category | TRCA Slab |
BPM | 12000-29380 |
ABPM / Dak sevak | 10000-24740 |
ಈ ದಿನಗಳು ನಿರ್ದಿಷ್ಟವಾಗಿರುವುದಿಲ್ಲ, ವರ್ಷಕ್ಕೊಮ್ಮೆ ಹೆಚ್ಚಾಗುತ್ತಿದ್ದು ಮೊದಲ ವರ್ಷದಲ್ಲಿ 550 ರೂಪಾಯಿಗಳು ಹೆಚ್ಚಾಗುತ್ತದೆ, ಎರಡನೇ ವರ್ಷದಲ್ಲಿ 650 ರೂಪಾಯಿಗಳು ಹೆಚ್ಚಾಗುತ್ತದೆ ಮತ್ತು ಮೂರನೇ ವರ್ಷದಲ್ಲಿ 800 ಗಳು ಹೆಚ್ಚಾಗುತ್ತದೆ. ಈ ರೀತಿಯಾಗಿ ವೇತನ ಪ್ರತಿವರ್ಷವೂ ಹೆಚ್ಚುತ್ತಾ ಹೋಗುತ್ತದೆ.
ವಯಸ್ಸಿನ ಮಿತಿ
1.ಕನಿಷ್ಠ ವಯಸ್ಸು 18 ವರ್ಷ
- ಗರಿಷ್ಠ ವಯಸ್ಸು 40 ವರ್ಷ
OBC ಅಭ್ಯರ್ಥಿಗಳಿಗೆ ಮೂರು ವರ್ಷ ವಯಸ್ಸು ಸಡಿಲಿಕೆ ಇರುತ್ತದೆ, ಹೊರತುಪಡಿಸಿ SC/ST ಅಭ್ಯರ್ಥಿಗಳಿಗೆ ಐದು ವರ್ಷದ ಸಡಿಲಿಕೆ ಇರುತ್ತದೆ.UR ಅಭ್ಯರ್ಥಿ/ PWD ಗಳಾಗಿದ್ದರೆ 10 ವರ್ಷ ತಡೀಲಿಕ್ಕೆ ಇರುತ್ತದೆ.
ಕರ್ನಾಟಕ ಪೋಸ್ಟಲ್ ಸರ್ಕಲ್ ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಕರ್ನಾಟಕ ಪೋಸ್ಟಲ್ ಸರ್ಕಲ್
ಪೋಸ್ಟ್ಗಳ ಸಂಖ್ಯೆ: 1714
ಉದ್ಯೋಗ ಸ್ಥಳ: ಕರ್ನಾಟಕ
ಪೋಸ್ಟ್ ಹೆಸರು; ಗ್ರಾಮೀಣ ದಕ್ ಸೇವಕ್(BPM/ABPM)
ಸಂಬಳ: 10,000- 29,380 ಪ್ರತಿ ತಿಂಗಳು.
ಜಿಲ್ಲೆಯ ಹೆಸರು | ಪೋಸ್ಟ್ ಗಳ ಸಂಖ್ಯೆ |
ಬಾಗಲಕೋಟೆ | 29 |
ಬಳ್ಳಾರಿ | 43 |
ಬೆಳಗಾವಿ | 42 |
ಬೆಂಗಳೂರು ಪೂರ್ವ | 11 |
ಬೆಂಗಳೂರು ದಕ್ಷಿಣ | 4 |
ಬೆಂಗಳೂರು ಪಶ್ಚಿಮ | 6 |
ಬೀದರ್ | 49 |
ಚನ್ನಪಟ್ಟಣ | 66 |
ಚಿಕ್ಕಮಗಳೂರು | 63 |
ಚಿಕ್ಕೋಡಿ | 45 |
ಚಿತ್ರದುರ್ಗ | 51 |
ದಾವಣಗೆರೆ ಕಚೇರಿ | 47 |
ಧಾರವಾಡ | 36 |
ಗದಗ | 63 |
ಗೋಕಾಕ್ | 13 |
ಹಾಸನ | 84 |
ಹಾವೇರಿ | 33 |
ಕಲಬುರ್ಗಿ | 44 |
ಕಾರವಾರ | 53 |
ಕೊಡಗು | 44 |
ಕೋಲಾರ | 75 |
ಮಂಡ್ಯ | 78 |
ಮಂಗಳೂರು | 52 |
ಮೈಸೂರು | 43 |
ನಂಜನಗೂಡು | 41 |
ಪುತ್ತೂರು | 89 |
ರಾಯಚೂರು | 49 |
RMS HB | 44 |
RMS Q | 6 |
ಶಿವಮೊಗ್ಗ | 74 |
ಸಿರ್ಸಿ | 48 |
ತುಮಕೂರು | 81 |
ಉಡುಪಿ | 110 |
ವಿಜಯಪುರ | 65 |
ಯಾದಗಿರಿ | 33 |
ಇದು ನಮ್ಮ ಕರ್ನಾಟಕ ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪೋಸ್ಟ್ಗಳು ಇದೆ ಎಂಬ ಮಾಹಿತಿಯನ್ನು ತಿಳಿಸಿದ್ದೇವೆ. ಉಡುಪಿಯಲ್ಲಿ ಅತಿ ಹೆಚ್ಚು ಪೋಸ್ಟ್ಗಳು ಖಾಲಿ ಇವೆ, 110 ಪೋಸ್ಟ್ಗಳು ಉಡುಪಿಯಲ್ಲಿ ಖಾಲಿ ಇದೆ. ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ .
ಅರ್ಜಿ ಶುಲ್ಕ
- ಸ್ತ್ರೀಯರು/ SC/ST/PWD ಮತ್ತು ಟ್ರಾನ್ಸ್ ವುಮೆನ್ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ಎಲ್ಲಾ ಇತರ ಅಭ್ಯರ್ಥಿಗಳು 100 ಪಾವತಿಸಬೇಕು.
- ಪಾವತಿ ವಿಧಾನ ಆನ್ಲೈನ್.
ಆಯ್ಕೆ ಪ್ರಕ್ರಿಯೆ
- ಮೆರಿಟ್ ಪಟ್ಟಿ, ದಾಖಲೆ ಪರಿಶೀಲನೆ ಮತ್ತು ಸಂದರ್ಶನ
ಬೇಕಾಗುವ ದಾಖಲಾತಿಗಳು
- ಫೋಟೋ ಮತ್ತು ಸಹಿ( ಸಿಗ್ನೇಚರ್)
- ಇ-ಮೇಲ್ ಐಡಿ, ಮೊಬೈಲ್ ನಂಬರ್
- ನಿವಾಸದ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಅಂಕಪಟ್ಟಿಗಳು
- ಶಿಕ್ಷಣದ ಪ್ರಮಾಣ ಪತ್ರಗಳು( 10ನೇ 12ನೇ ಅಥವಾ ಯಾವುದೇ ಡಿಗ್ರಿ ಪಾಸ್)
- ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರಗಳು.
- ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್( ಐಡಿ ಪ್ರೂಫ್ )
ಈ ಎಲ್ಲ ದಾಖಲೆಗಳನ್ನು ನೀವು ಅರ್ಜಿಯನ್ನು ಸಲ್ಲಿಸುವಾಗ ನೀಡಬೇಕಾಗುತ್ತದೆ. ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು.