ಎಲ್ಲರಿಗೂ ನಮಸ್ಕಾರ..
Education loan: ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದೆ ಅದರಲ್ಲೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಸರ್ಕಾರವು ಬಹಳಷ್ಟು ಯೋಜನೆ ಮತ್ತು ಸೌಲಭ್ಯಗಳನ್ನು ನೀಡುತ್ತಿದೆ ಅದರಲ್ಲಿ ಇದು ಕೂಡ ಒಂದು, ಹೌದು ಸರ್ಕಾರದಿಂದ ಮತ್ತು ದೇಶದ ಪ್ರತಿಷ್ಠಿತ ಕಂಪನಿಗಳಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷವು ಅರ್ಜಿಗಳನ್ನು ಸ್ವೀಕರಿಸಿ ಅರ್ಹ ಅಭ್ಯರ್ಥಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಆದರೆ ಕೆಲವರಿಗೆ ಮಾತ್ರ ವಿದ್ಯಾರ್ಥಿ ವೇತನ ಪಡೆಯುವಲ್ಲಿ ಸಮಸ್ಯೆ ಆಗಬಹುದು ಅಥವಾ ವಿದ್ಯಾರ್ಥಿ ವೇತನ ಪಡೆದರು ವಿದ್ಯಾಭ್ಯಾಸಕ್ಕೆ ಹಾರ್ದಿಕ ಸಮಸ್ಯೆ ಉಂಟಾಗಬಹುದು ಆದ್ದರಿಂದ ಸರ್ಕಾರ ಅಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾಭ್ಯಾಸದ ಸಾಲ ನೀಡಲಿದೆ.
2023 24 ನೇ ಸಾಲಿನ ಶೈಕ್ಷಣಿಕ ಸಾಲ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಈ ಸಾಲ ಸೌಲಭ್ಯಕ್ಕೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸೋಕೆ ಕೊನೆಯ ದಿನಾಂಕ ಯಾವುದು ಎಂಬ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Education loan: ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ.!
2023 24 ನೇ ಸಾಲಿನ ಶೈಕ್ಷಣಿಕ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸಾಲ ಸೌಲಭ್ಯವನ್ನು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಸಾಲವನ್ನು ನೀಡಲಾಗುತ್ತಿದೆ. ಅಂದ ಹಾಗೆ ಈ ಯೋಜನೆಯ ಅಡಿಯಲ್ಲಿ ಪದವಿ ನಂತರದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ ಹಿಂದೂ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮೇಲ್ಪಟ್ಟು 35 ವರ್ಷ ಒಳಗಿನವರು ಆಗಿರಬೇಕು. ಹಾಗೆ ಸಾಲ ಪಡೆಯಲು ವಿದ್ಯಾರ್ಥಿಯು cet ಅಥವಾ ಎನ್ ಇ ಇ ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಮತ್ತು ಪಿ ಎಚ್ ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಾಲ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಥಿಗಳು ಸಾಲ ಪಡೆಯಲು ನಿಯಮ.
ಈಗಾಗಲೇ ತಿಳಿಸಿದ ಹಾಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 18 ವರ್ಷ ಮೇಲ್ಪಟ್ಟು 35 ವರ್ಷ ಒಳಗಿನವರು ಆಗಿರಬೇಕು ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಅಥವಾ ನಗರ ಪ್ರದೇಶ ಆಗಿರಲಿ ರೂ 600000 ಮಿತಿಯ ಒಳಗೆ ಇರಬೇಕು ವಿದ್ಯಾರ್ಥಿ ಕರ್ನಾಟಕ ರಾಜ್ಯದವರು ಆಗಿರಬೇಕು ಮತ್ತು ಅವರ ಕಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯ ಜೋಡಣೆ ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಈ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ.?
ವಿದ್ಯಾರ್ಥಿಯು ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆಯಲು ಆಸಕ್ತಿ ಹೊಂದಿದ್ದರೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದ್ದು ಅಧಿಕೃತ ವೆಬ್ಸೈಟ್ ಆದ www.kacdc.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನು ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ ಆಗಿದ್ದು ಇದರ ಒಳಗಾಗಿ ಅರ್ಜಿ ಸಲ್ಲಿಸಬಹುದು ಹಾಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕರ್ನಾಟಕ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ