ಎಲ್ಲರಿಗೂ ನಮಸ್ಕಾರ..
ರೈತರಿಗಾಗಿ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಪ್ರತಿವರ್ಷ ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಅದರಲ್ಲೂ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಮತ್ತು ರೈತರ ಕಷ್ಟಗಳನ್ನು ಪರಿಹರಿಸಲು ಅವರ ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಲು ಕೇವಲ ಜಮೀನಿನಲ್ಲಿ ಮಾಡುವ ಕೃಷಿ ಮಾತ್ರವಲ್ಲದೆ ಉಪಕಸುಬುಗಳನ್ನು ಮಾಡಲು ಸರ್ಕಾರದಿಂದ ಉತ್ತೇಜನ ನೀಡುತ್ತಿದೆ ಜೊತೆಗೆ ಉಪ ಕಸುಬುಗಳನ್ನು ಮಾಡಲು ಆರ್ಥಿಕವಾಗಿ ಸಾಲ ಸೌಲಭ್ಯವನ್ನು ಕೂಡ ನೀಡುತ್ತಿದೆ, ಸದ್ಯ ಇದೀಗ ಸರ್ಕಾರದಿಂದ ರೈತರಿಗೆ ಕೇವಲ ಬೆಲೆಯಿಂದ ಪಡೆಯುವ ವಾರ್ಷಿಕ ಆದಾಯ ಮಾತ್ರವಲ್ಲದೆ ಉಪ ಕಸುಬುಗಳಿಂದ ಆದಾಯ ಗಳಿಸಲು ಸಹಾಯ ಆಗಲಿ ಎಂದು ಸಾಲ ಸೌಲಭ್ಯವನ್ನು ನೀಡುತ್ತಿದೆ ನೀವು ಕೂಡ ರೈತರಾಗಿದ್ದು ನೀವು ಉಪಕಸುಬುಗಳಾದ ಹೈನುಗಾರಿಕೆ ಮೀನು ಸಾಕಾಣಿಕೆ ಅಥವಾ ಕುರಿ ಸಾಕಾಣಿಕೆ ಹಾಗೂ ಪಶು ಸಂಗೋಪನೆಯನ್ನು ಮಾಡಬೇಕೆಂದು ಯೋಚಿಸುತ್ತಿದ್ದರೆ ಸರ್ಕಾರದ ಸಾಲ ಸೌಲಭ್ಯ ಪಡೆಯುವ ಮಾಹಿತಿಯ ಬಗ್ಗೆ ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ.!
ಕೇಂದ್ರ ಸರ್ಕಾರದಿಂದ ಎಲ್ಲಾ ರೈತರಿಗೂ ಕೇವಲ ಕೃಷಿಯಲ್ಲಿ ಮಾತ್ರ ತೊಡಗದೆ ಬೇರೆ ಉಪಕಸುಬುಗಳನ್ನು ಮಾಡಿ ಹಣಗಳಿಸಲು ಸಾಲ ಸೌಲಭ್ಯವನ್ನು ನೀಡುತ್ತಿದೆ, ಹೌದು ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದರೆ ಬೆಳೆ ಫಸಲಿಗೆ ಬರುವವರೆಗೂ ಕಾಯಬೇಕಾಗುತ್ತದೆ ಆದರೆ ಆ ಸಮಯದಲ್ಲಿ ಉಪಕಸುಬುಗಳನ್ನು ಮಾಡಿ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದು ಸರ್ಕಾರ ಈಗಾಗಲೇ ರೈತರಿಗೆ ಮಾಹಿತಿಯನ್ನು ಹಂಚಿದೆ ಆದರೆ ಕೆಲವರ ಬಳಿ ಉಪಕಸುಬು ಮಾಡಲು ಹಣದ ಸಮಸ್ಯೆ ಇರುತ್ತದೆ ಹಾಗಾಗಿ ಸರ್ಕಾರದಿಂದ ಉಪಕಸುಬುಗಳನ್ನು ಅಂದರೆ ಹೈನುಗಾರಿಕೆ ಮೀನು ಸಾಕಾಣಿಕೆ ಪಶುಸಂಗೋಪನೆ ಮಾಡುವಂತಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಮೂರು ಲಕ್ಷದವರೆಗೆ ಸಾಲ ನೀಡಲು ಸರ್ಕಾರ ನಿರ್ಧರಿಸುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ರೈತರಿಗೆ ಮೂರು ಲಕ್ಷದವರೆಗೆ ಸಾಲ.
ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ವಿಶೇಷವಾಗಿ ರೈತರಿಗಾಗಿಯೇ ಸರ್ಕಾರ ಬಿಡುಗಡೆ ಮಾಡಿದ್ದು ಈ ಕಾರ್ಡ್ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ಸುಲಭವಾಗಿ ಸಾಲ ಸೌಲಭ್ಯವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ, ಈ ಕ್ರೆಡಿಟ್ ಕಾರ್ಡ್ ಅನ್ನು ರೈತರ ಎಲ್ಲಾ ದಾಖಲೆಗಳನ್ನು ಪಡೆದು ಆ ದಾಖಲೆಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ನೀಡಲಾಗಿರುತ್ತದೆ ಹಾಗಾಗಿ ಅದರ ಮೇಲೆ ಹೈನುಗಾರಿಕೆ ಮೀನು ಸಾಕಾಣಿಕೆ ಕುರಿ ಸಾಕಾಣಿಕೆ ಹಾಗೂ ಪಶು ಸಂಗೋಪನೆಯನ್ನು ಮಾಡುವ ರೈತರಿಗೆ ಹಾಗೂ ಕೃಷಿಗೆ ಪೂರಕವಾದ ಯಾವುದೇ ಕಸುಬುಗಳಿಗೂ ಸಾಲವನ್ನು ಪಡೆದುಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ಯಾವುದಕ್ಕೆ ಎಷ್ಟು ಸಾಲ ಸಿಗಲಿದೆ.
ಈಗಾಗಲೇ ತಿಳಿಸಿದ ಹಾಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ರೈತರಿಗೆ ಕೃಷಿಗೆ ಸಂಬಂಧಪಟ್ಟ ಹಾಗೆ ಮತ್ತು ಹೈನುಗಾರಿಕೆ ಪಶು ಸಂಗೋಪನೆಗಳಿಗೂ ಕೂಡ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು ಇದರಲ್ಲಿ ರೈತರು ಸುಮಾರು ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿತ್ತು ಇದರಲ್ಲಿ ಕೇವಲ ಮೂರರಿಂದ ನಾಲ್ಕರಷ್ಟು ಬಡ್ಡಿ ದರದಲ್ಲಿ ಸಾಲ ಸಿಗಲಿದೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 1.6 ಲಕ್ಷ ರೂಪಾಯಿವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಹೆಚ್ಚಿನ ಸಾಲಕ್ಕೆ ಜಮೀನಿನ ಮತ್ತು ರೈತನ ಸಂಪೂರ್ಣ ದಾಖಲೆಗಳನ್ನು ಪಡೆದು ಹಣ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವುದು ಹೇಗೆ.?
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಈಗಾಗಲೇ ತಿಳಿಸಿದ ಹಾಗೆ ಕೃಷಿ ಹಾಗೂ ಹೈನುಗಾರಿಕೆ ಪಶುಸಂಗೋಪನೆ ಮುಂತಾದ ಉಪಕಸುಬುಗಳಿಗೆ ರೈತರು ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ ಈ ಸಾಲ ಪಡೆಯಲು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅಥವಾ ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ