ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ದಿಂದ ಅರ್ಜಿ ಬಿಡುಗಡೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.?
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಬ್ಯಾಂಕ್ ಖಾತೆಗೆ ಬರಲಿದೆ ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಬಿಡುಗಡೆ ಮಾಡಿರುವುದಾಗಿ ಮಾಹಿತಿಗಳು ತಿಳಿದುಬಂದಿದೆ ಸದ್ಯ ಸರ್ಕಾರದಿಂದ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆಸಿ ಪಕ್ಷದ ಎಲ್ಲಾ ಸದಸ್ಯರು ಒಪ್ಪಿ ಈ ಗ್ಯಾರಂಟಿಗಳನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತದೆ ಅಂದರೆ ಕೆಲವು ಗ್ಯಾರಂಟಿಗಳಿಗೆ ಅರ್ಜಿ ಸ್ವೀಕರಿಸಿ ಅರ್ಜಿ ಪರಿಶೀಲನೆ ಮಾಡಿ ಗ್ಯಾರಂಟಿಗಳು ಅವರ ಕೈ ಸೇರಲು ಸ್ವಲ್ಪ ಕಾಲಾವಕಾಶ ಬೇಕಾಗಿರುತ್ತದೆ ಎಂದು ಇದೀಗ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಮಹಿಳೆಯರಿಗೆ ರಾಜ್ಯದಂತ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಇದೇ ಜೂನ್ 11ನೇ ದಿನಾಂಕದಿಂದ ಶುರುವಾಗಲಿತ್ತು ಉಳಿದ 4 ಗ್ಯಾರಂಟಿಗಳು ಜುಲೈ ಮತ್ತು ಆಗಸ್ಟ್ ತಿಂಗಳಿನಿಂದ ಜಾರಿಯಾಗಲಿದೆ.
ಗೃಹಲಕ್ಷ್ಮಿ. ರಾಜ್ಯದ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 2000 ಉಚಿತ.
ದೇಶದಲ್ಲಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿ ಮಾಡಿದ್ದು ಈ ಯೋಜನೆ ಅಡಿ ಪ್ರತಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷವು ದೇಶದ ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ಸಮಯದಲ್ಲಿ ನೀಡಿ ಹೆಚ್ಚು ಮತ ಪಡೆದು ದೇಶದಲ್ಲಿ ತಮ್ಮ ಅಧಿಕಾರ ಗಿಟ್ಟಿಸಿಕೊಳ್ಳುವ ಒಂದು ನಿರೀಕ್ಷೆಯಿಂದ ಈ ಯೋಜನೆಯನ್ನು ಜಾರಿ ಮಾಡಿದ್ದಾರೆ ಇದೀಗ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಯಾಗಿದ್ದು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಈ ಗೃಹಲಕ್ಷ್ಮಿ ಯೋಜನೆಯ ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದು ಇನ್ನು ಈ ಸಲುವಾಗಿ ಅರ್ಜಿ ಸ್ವೀಕರಿಸಲು ಮತ್ತು ಮಹಿಳೆಯರಿಂದ ಅರ್ಜಿ ಸ್ವೀಕರಿಸಲು ಆದೇಶ ಹೊರಡಿಸಿದೆ.
ಗೃಹಲಕ್ಷ್ಮಿ ಯೋಜನೆಯ ಉಪಯೋಗ
ಗೃಹಲಕ್ಷ್ಮಿ ಯೋಜನೆಯ ಉಪಯೋಗ ಕೇಳುವುದಾದರೆ ಮೊದಲನೆಯದಾಗಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಮತ್ತು ಅಧಿಕಾರ ಗಿಟ್ಟಿಸಿಕೊಳ್ಳಲು ಸೃಷ್ಟಿಸಿದ ಒಂದು ಯೋಜನೆಯಾಗಿದೆ ಆದರೂ ಯೋಜನೆ ಬಡವರಿಗೆ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಬಹಳ ಅನುಕೂಲವಾಗಲಿದ್ದು ರಾಜ್ಯದಲ್ಲಿ ಈಗಲೂ ದಿನಗೂಲಿ ಕೆಲಸ ಮಾಡುತ್ತಿರುವ ಬಡವರಿಗೆ ಒಂದು ದಿನದ ಕೂಲಿ ಒಂದು ದಿನದ ಊಟಕ್ಕೆ ಸಮವಾಗುತ್ತಿರುವಂತಹ ಮನೆಗಳಿಗೆ ಇದು ಬಹಳ ಅನುಕೂಲ ಆಗಲಿದೆ ಏಕೆಂದರೆ ಮನೆಯಲ್ಲಿ ಮಕ್ಕಳಿಗೆ ಅಥವಾ ವಯಸ್ಸಾದವರಿಗೆ ಯಾವುದಾದರೂ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಅಥವಾ ಇನ್ನಿತರ ಯಾವುದಾದರೂ ಸಮಸ್ಯೆಗಳು ಬಂದಲ್ಲಿ ಅಂತಹ ಸಮಯದಲ್ಲಿ ಸರ್ಕಾರದಿಂದ ಮಹಿಳೆಯರಿಗೆ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ನೀಡುವ ಈ 2000 ಹಣ ಉಪಯೋಗ ವಾಗಲಿದೆ.
ಗೃಹಲಕ್ಷ್ಮಿ ಯೋಜನೆಯಿಂದ ಮುಂದಾಗುವ ಸಮಸ್ಯೆ
ಸದ್ಯ ಈ ಬಗ್ಗೆ ಈಗಾಗಲೇ ಕೆಲವು ಮಾಧ್ಯಮಗಳು ಮತ್ತು ತಜ್ಞರು, ಅಧ್ಯಯನ ಮಾಡಿರುವ ಪ್ರಕಾರ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಮಹಿಳೆಯರಿಗೆ 2000 ಉಚಿತವಾಗಿ ಪ್ರತಿ ತಿಂಗಳು ನೀಡಲು ರಾಜ್ಯ ಸರ್ಕಾರ ಶುರುಮಾಡಿದರೆ ಇದು ಕೆಲವು ಬಡ ಮಹಿಳೆಯರಿಗೆ ಮಾತ್ರ ಅನುಕೂಲವಾಗಲಿದೆ ಏಕೆಂದರೆ ಈಗಾಗಲೇ ಹೇಳಿದಾಗೆ ಕೆಲವು ಸಮಸ್ಯೆಗಳಿಗೆ ಸರ್ಕಾರದಿಂದ ನೀಡಲಿರುವ ಈ ಯೋಜನೆಯ ಹಣ ಉಪಯೋಗವಾಗಲಿದೆ ಆದರೆ ಉಳಿದ ಮಧ್ಯಮ ವರ್ಗದ ಮಹಿಳೆಯರಿಗೆ ಮತ್ತು ಕೆಲ ಬಡ ಮಹಿಳೆಯರಿಗೆ ಇದು ಸಮಸ್ಯೆ ಆಗಬಹುದು ಏಕೆಂದರೆ ಈಗಾಗಲೇ ರಾಜ್ಯದಲ್ಲಿ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದು ಈ ಬೆನ್ನಲ್ಲೇ ಮಹಿಳೆಯರಿಗೆ ಪ್ರತಿ ತಿಂಗಳು ಉಚಿತ ಎರಡು ಸಾವಿರ ಉಚಿತ ಬಸ್ ಪ್ರಯಾಣ ಈ ಎಲ್ಲಾ ಸೇವೆಗಳನ್ನು ರಾಜ್ಯ ಸರ್ಕಾರ ನೀಡುವುದರಿಂದ ಮಹಿಳೆಯರು ಅದರಲ್ಲೂ ರೈತ ಮಹಿಳೆಯರು ಜಮೀನುಗಳಲ್ಲಿ ಮತ್ತು ಬೇರೆ ಕೆಲಸಗಳಲ್ಲಿ ಕೆಲಸ ಮಾಡುವ ಆಸಕ್ತಿ ಕಳೆದುಕೊಳ್ಳುತ್ತಾರೆ ಇದರಿಂದ ಮುಂದಿನ ಭವಿಷ್ಯದಲ್ಲಿ ರಾಜ್ಯದ ಮಹಿಳೆಯರಿಂದ ಸಮಸ್ಯೆಗಳು ಉಂಟಾಗಬಹುದು.
ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ದಿಂದ ಅರ್ಜಿ ಬಿಡುಗಡೆ
ಸದ್ಯ ಈ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಹಳ ಲಿಂಕ್ಗಳು ಮತ್ತು ಅರ್ಜಿಗಳ ಹೆಸರುಗಳು ಕೇಳಿ ಬರುತ್ತಿದ್ದು ಸರ್ಕಾರದಿಂದ ಈ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯಲು ಅರ್ಜಿ ಬಿಡುಗಡೆ ಮಾಡಲಾಗಿದೆ ಈಗಲೇ ಅರ್ಜಿ ಸಲ್ಲಿಸಿ, ಈ ರೀತಿಯಾಗಿ ಸಲ್ಲಿಸಿ ಎಂಬ ಕೆಲವು ಮಾಹಿತಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವಿಡಿಯೋಗಳು ಮತ್ತು ಪೋಸ್ಟ್ಗಳು ಬರುತ್ತದೆ ಆದರೆ ಈ ಬಗ್ಗೆ ಸರ್ಕಾರದಿಂದ ಜೂನ್ ಎರಡನೇ ದಿನಾಂಕದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಗ್ಯಾರಂಟಿ ಘೋಷಣೆಯ ಸಮಯದಲ್ಲೇ ಸ್ಪಷ್ಟವಾಗಿ ತಿಳಿಸಿದ್ದು ಜೂನ್ 15 ನೇ ದಿನಾಂಕದಿಂದ ಜುಲೈ 15 ನೇ ದಿನಾಂಕದವರೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಮತ್ತು ಅದೇ ಸಮಯದಲ್ಲಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಸಹ ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ.
ಆದರೆ ಈಗಾಗಲೇ ಕೆಲವು ಸೋಶಿಯಲ್ ಮೀಡಿಯಾ ಗಳಲ್ಲಿ ತಪ್ಪು ಲಿಂಕ್ ಗಳನ್ನು ನೀಡುತ್ತಿದ್ದು ಮತ್ತು ಅರ್ಜಿ ಸಲ್ಲಿಸಲು ಸ್ವಲ್ಪ ಶುಲ್ಕವನ್ನು ಪಾವತಿಸಬೇಕು ಎಂದು ಹಣ ಪಡೆಯುತ್ತಿದ್ದಾರೆ ಆದರೆ ಸರ್ಕಾರದಿಂದ ಇವರಿಗೆ ಯಾವುದೇ ಲಿಂಕ್ ಬಿಡುಗಡೆ ಮಾಡಿಲ್ಲ ಜೂನ್ 15ನೇ ದಿನಾಂಕದಿಂದ ಲಿಂಕ್ ಬಿಡುಗಡೆಯಾಗಲಿದೆ ಜುಲೈ 15 ನೇ ದಿನಾಂಕದವರೆಗೆ ಲಿಂಕ್ನಲ್ಲಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶವನ್ನು ಸಹ ನೀಡಲಾಗಿದೆ ಅಲ್ಲಿಯವರೆಗೆ ಮಹಿಳೆಯರು ಅರ್ಜಿ ಸಲ್ಲಿಸುವವರು ಕಾಯುವುದು ಸೂಕ್ತ ಇಲ್ಲದಿದ್ದರೆ ಯಾವುದಾದರೂ ಬೇರೆ ಲಿಂಕ್ಗಳಲ್ಲಿ ನಿಮ್ಮ ದಾಖಲೆಗಳನ್ನು ನೀಡಿ ಮೋಸ ಹೋಗಬೇಡಿ.
ಇದನ್ನು ಓದಿ: 2000 ನೋಟು ಬ್ಯಾನ್ ಹಿನ್ನೆಲೆ ಮಾರುಕಟ್ಟೆಗೆ ಹೊಸ 1000 ರೂಪಾಯಿ ಮುಖಬೆಲೆಯ ನೋಟು ಎಂಟ್ರಿ.! ಇಲ್ಲಿದೆ ನೋಡಿ ಹೊಸ 1000 ದ ನೋಟ್.?
ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದ ಲಿಂಕ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾದ ದಾಖಲೆಗಳು ಯಾವುವು
ಈಗಾಗಲೇ ಈ ಬಗ್ಗೆ ಕೆಲವು ಮಾಹಿತಿಗಳನ್ನು ಸರ್ಕಾರದಿಂದ ನೀಡಿದ್ದು ಅರ್ಜಿ ಸಲ್ಲಿಸಲು ಈ ಮಾಹಿತಿಗಳು ಕಡ್ಡಾಯ ಎಂದು ತಿಳಿಸಿದೆ.
- ಅರ್ಜಿ ಸಲ್ಲಿಸಲು ಮಹಿಳೆಯರ ಆಧಾರ್ ಕಾರ್ಡ್ ಕಡ್ಡಾಯ
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್
- ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
- ಮೊಬೈಲ್ ನಂಬರ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಕೊನೆಯದಾಗಿ ವಿಳಾಸದ ಪುರಾವೆ ಕೇಳುವ ಸಾಧ್ಯತೆ ಇದೆ
ಈ ಎಲ್ಲಾ ದಾಖಲೆಗಳನ್ನು ಹೊಂದಿದ್ದರೆ ಅಂತಹ ಮಹಿಳೆಯರು ಸುಲಭವಾಗಿ ಜೂನ್ 15ರಿಂದ ಬಿಡುಗಡೆ ಮಾಡುವ ಸರ್ಕಾರದ ಅಧಿಕೃತ ವೆಬ್ಸೈಟ್ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: ಮಧ್ಯಪಾನ ಪ್ರಿಯರಿಗೆ ಬಿಗ್ ಶಾಕ್.! ಜುಲೈ 1 ರಿಂದ ಮಧ್ಯಪಾನ ತೆರಿಗೆ ಹೆಚ್ಚಳ, ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಗೆ ಹೊಸ ಆದೇಶ.?
ಅರ್ಜಿ ಸಲ್ಲಿಸುವುದು ಹೇಗೆ.?
ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆಯು ಹಲವು ಹಂತಗಳನ್ನು ಒಳಗೊಂಡಿದೆ.
- ಮೊದಲನೆಯದಾಗಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ವೆಬ್ಸೈಟ್ನ ಮುಖಪುಟವು ನಿಮ್ಮ ಪರದೆಯ ಮೇಲೆ ತೆರೆಯುತ್ತದೆ
- ನಂತರ ಕರ್ನಾಟಕ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ
- ಕೇಳಿರುವ ಎಲ್ಲಾ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ
- ಈ ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಕರ್ನಾಟಕ ಒನ್ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಕಾರ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
- ಅಧಿಕಾರಿಗಳು ನಿಮ್ಮ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ
- ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪ್ರೋತ್ಸಾಹದ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಗಸ್ಟ್ ತಿಂಗಳಿನಿಂದ ವರ್ಗಾಯಿಸಲಾಗುತ್ತದೆ.
ಇದನ್ನು ಓದಿ: 2000 ನೋಟು ಬ್ಯಾನ್ ಹಿನ್ನೆಲೆ ಮಾರುಕಟ್ಟೆಗೆ ಹೊಸ 1000 ರೂಪಾಯಿ ಮುಖಬೆಲೆಯ ನೋಟು ಎಂಟ್ರಿ.! ಇಲ್ಲಿದೆ ನೋಡಿ ಹೊಸ 1000 ದ ನೋಟ್.?