ಹೌದು ಸದ್ಯ ರಾಜ್ಯಾದ್ಯಂತ ಪ್ರತಿದಿನವೂ ಕೂಡ ಜನರು ತಮ್ಮ ಆಸ್ತಿಗಳನ್ನು ಮಾರುವ ಮತ್ತು ಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿದ್ದು ಇದಕ್ಕೆ ರಾಜ್ಯ ಸರ್ಕಾರವು ಇದೀಗ ಹೊಸ ಮಾದರಿಯನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಆಸ್ತಿ ರಜಿಸ್ಟ್ರೇಷನ್ ಮಾಡಿಸುವವರಿಗೆ ಇದುವೇ ಉಪಯುಕ್ತವಾಗಿದ್ದು ಇದುವೇ ರಾಜ್ಯದ ಜನತೆಗೆ ಗುಡ್ ನ್ಯೂಸ್ ಆಗಿದೆ.
ಆಸ್ತಿ ರಿಜಿಸ್ಟ್ರೇಷನ್ ಮಾಡಿಸುವಲ್ಲಿ ಹೊಸ ರೂಲ್ಸ್!
ಕಂದಾಯ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿ. ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಬಹಳಷ್ಟು ವಿಳಂಬ ಆಗ್ತಿದೆ. ಜನರು ಅವರ ಆಸ್ತಿ ಅವರು ಮಾರಾಟ ಮಾಡುವುದಕ್ಕೆ ಪಡಬಾರದ ಯಾತನೆ ಅನುಭವಿಸಿದ್ದಾರೆ. ಬಹಳ ವರ್ಷಗಳ ಸುಧಾರಣೆಯಿಂದ ಇದನ್ನು ಬಗೆಹರಿಸಲು ಕಾವೇರಿ-2 ಎಂಬ ಪದ್ದತಿ ತರಲಾಗಿದೆ. ಕಾವೇರಿ-2 ವ್ಯವಸ್ಥೆ ಬಗ್ಗೆ ಅನುಕೂಲ ಅನಾನುಕೂಲ ಎರಡೂ ಆಗ್ತಿದೆ ಎಂಬ ಮಾಹಿತಿ ಇದೆ. ಏಪ್ರಿಲ್ ನಿಂದ ನೊಂದಣಿ ಪ್ರಕ್ರಿಯೆಯಲ್ಲಿ ಕಾವೇರಿ 2 ಅಳವಡಿಸಿಕೊಳ್ಳಲಾಗಿದೆ. 256 ಸಬ್ ರಿಜಿಸ್ಟ್ರಾರ್ ಕಚೇರಿಗಳು ಇವೆ. 251ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಂಜೆಯೊಳಗೆ ಕಾವೇರಿ -2 ಅನುಷ್ಟಾನ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಹಳಷ್ಟು ಜನ ತಮ್ಮ ಆಸ್ತಿಯನ್ನು ಮಾರಲು ಹಾಗೂ ತೆಗೆದುಕೊಳ್ಳಲು ಬಹಳಷ್ಟು ಕಷ್ಟ ಪಡುತ್ತಿದ್ದ ಕಾರಣ ಸರ್ಕಾರವು ಆಸ್ತಿ ರಿಜಿಸ್ಟ್ರೇಷನ್ ಪ್ರಕ್ರಿಯೆಯಲ್ಲಿ ಹೊಸ ಮಾರ್ಗವನ್ನು ತರಲು ಮುಂದಾಗಿದ್ದು ಕಾವೇರಿ ಟು ಎಂಬ ಪದ್ಧತಿಯನ್ನು ಈಗಾಗಲೇ ಜಾರಿಗೆ ತಂದಿದೆ ಈ ಪದ್ಧತಿಯ ಅನ್ವಯ ಇನ್ನು ಮುಂದೆ ನಾವು ಯಾವುದೇ ಆಸ್ತಿ ಮಾರಾಟ ಹಾಗೂ ಕೊಳ್ಳಲು ಇನ್ನು ಮುಂದೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕಾದು ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ ಎಲ್ಲವೂ ಕೂಡ ಆನ್ಲೈನ್ ನಲ್ಲಿಯೇ ಆಗಲಿದೆ.
ಈಗಾಗಲೇ ಸರ್ಕಾರವು ಜೂನ್ ತಿಂಗಳಿನಿಂದಲೇ ಕಾವೇರಿ ಟು ಎಂಬ ಹೊಸ ಮಾದರಿಯ ವೆಬ್ಸೈಟ್ ಬಿಡುಗಡೆ ಮಾಡಿದ್ದು ಇದರಲ್ಲಿಯೇ ಇನ್ನು ಮುಂದೆ ನಾವು ಯಾವುದೇ ಆಸ್ತಿ ಮಾರಾಟ ಹಾಗೂ ಖರೀದಿಯ ಕುರಿತು ಮಾಹಿತಿ ಪಡೆಯಬಹುದು ಹಾಗೂ ನಮಗೆ ಬೇಕಾದ ದಿನದಂದು ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಳ್ಳಬಹುದು.
ಇದನ್ನು ಓದಿ: ಗೃಹಜ್ಯೋತಿ ಯೋಜನೆಗೆ ಅಧಿಕೃತ ಅರ್ಜಿ ಪ್ರಾರಂಭ! 200 Unit ಉಚಿತ ಕರೆಂಟಿಗೆ ಈಗಲೇ ಅರ್ಜಿ ಸಲ್ಲಿಸಿ!
ಆನ್ಲೈನ್ ನಲ್ಲಿಯೇ ಆಸ್ತಿ ಮಾರಾಟ ಹಾಗೂ ಖರೀದಿ ನಡೆಯಲಿದೆ!
ಈ ಮೇಲೆ ತಿಳಿಸಿದ ಹಾಗೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡರ ಸುದ್ದಿಗೋಷ್ಠಿ ನಡೆಸಿದ್ದು ಆಸ್ತಿ ಮಾರಾಟ ಹಾಗೂ ಕೊಳ್ಳುವಲ್ಲಿ ಹೊಸ ಮಾದರಿಯನ್ನು ಜಾರಿಗೆ ತಂದಿದ್ದು ಈ ಮಾದರಿಯ ಅನ್ವಯ ಇನ್ನು ಮುಂದೆ ಯಾವುದೇ ಆಸ್ತಿ ಮಾರಾಟ ಹಾಗೂ ಖರೀದಿಯ ವೇಳೆ ನಮ್ಮ ಸಂಪೂರ್ಣ ದಾಖಲಾತಿಗಳನ್ನು ಕಾವೇರಿ ಟು ಎಂಬ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಮಾಡಿದ ಬಳಿಕ ಅದನ್ನು ಸಬ್ ರಿಜಿಸ್ಟರ್ ನೇರವಾಗಿ ಪರಿಶೀಲಿಸಿ ದಾಖಲಾತಿಗಳು ಸರಿಯಾಗಿದೆ ಎಂದು ಆನ್ಲೈನ್ ಮೂಲಕವೇ ನಮಗೆ ಮೆಸೇಜ್ ಕಳುಹಿಸಲಿದ್ದಾರೆ ಮೆಸೇಜ್ ತಲುಪಿದ ಬಳಿಕ ನಮಗೆ ಬೇಕಾದ ದಿನಾಂಕದಂದು ನಾವೇ ಅವೈಲಬಿಲಿಟಿ ಚೆಕ್ ಮಾಡಿಕೊಂಡು ಸಬ್ ರಿಜಿಸ್ಟರ್ ಆಫೀಸ್ ಗೆ ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಳ್ಳಬಹುದು. ನಮಗೆ ಬೇಕಾದ ಸಮಯಕ್ಕೆ ನಾವು ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಂಡಲ್ಲೇ ಆ ದಿನಾಂಕದ ಬಳಿಕ ನಾವು ಸಬ್ ರಿಜಿಸ್ಟರ್ ಆಫೀಸ್ ಗೆ ಭೇಟಿ ನೀಡಿ ಫೋಟೋ ಮತ್ತು ಬೆರಳಚ್ಚುಗಳನ್ನು ನೀಡುವ ಮೂಲಕ ನೇರವಾಗಿ ನಿಮ್ಮ ಆಸ್ತಿ ಮಾರಾಟ ಹಾಗೂ ಖರೀದಿಯನ್ನು ಮಾಡಬಹುದು.
ಸಂಪೂರ್ಣವಾಗಿ ಆಸ್ತಿಯ ದಾಖಲಾತಿಗಳಿಂದ ಹಿಡಿದು ಸರ್ಕಾರಕ್ಕೆ ನಾವು ಕಟ್ಟಬೇಕಾದ ತೆರಿಗೆ ಹಣ ಅಥವಾ ಡಿಡಿ ಹಣವನ್ನು ಕೂಡ ನೇರವಾಗಿ ಆನ್ಲೈನ್ ಮೂಲಕವೇ ನಾವು ಇನ್ನು ಮುಂದೆ ಪಾವತಿ ಮಾಡಬೇಕಾಗುತ್ತದೆ ಇದು ಸಂಪೂರ್ಣ ಸುಲಭವಾಗಿ ತಮ್ಮ ಆಸ್ತಿ ಮಾರಾಟ ಹಾಗೂ ಖರೀದಿ ಮಾಡಲು ಉಪಯುಕ್ತವಾಗಲಿ ಎಂದು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಇದನ್ನು ಓದಿ: ಗೃಹಜ್ಯೋತಿ ಯೋಜನೆಗೆ ಅಧಿಕೃತ ಅರ್ಜಿ ಪ್ರಾರಂಭ! 200 Unit ಉಚಿತ ಕರೆಂಟಿಗೆ ಈಗಲೇ ಅರ್ಜಿ ಸಲ್ಲಿಸಿ!
ಲೇಖನವನ್ನು ಇಲ್ಲಿಯವರೆಗೆ ಉದ್ದಕ್ಕೆ ಧನ್ಯವಾದಗಳು ಶುಭದಿನ!